ಗುರುವಾರ, ಜುಲೈ 25, 2013

5 ಪೈಸೆಯ ಪೆಪ್ಪರ್ಮೆ೦ಟಿನ ಖುಶಿ ೩೦ ರೂಪಾಯಿಯ ಕಿ೦ಡರ್ ಜಾಯ್ ನಲ್ಲೂ ಇಲ್ಲಾ...!!!!!!!!

ಒಂದು ದಿನ ನನ್ನ ಮಗ ಸ್ಕೂಲಿನಿಂದ ಬಂದವನೇ" ಅಮ್ಮ ನೀನು ನನಗೇಏನಾದರೂ ಗಿಫ್ಟ್ ಕೊಡಿಸಬೆಕು."ಎಂದ. "ಯಾಕೋ ,ಏನೋ ವಿಶೇಷ "ಎಂದೆ. "ಅಮ್ಮಾ ನಾನು ಸ್ಟೋರಿ ಟೆಲ್ಲಿಂಗ್ ಕಾಂಪಿಟೇಷನ್ನಲ್ಲಿ ಫಸ್ಟ್. "ಎಂದ . "ಸರಿ,ನಾಳೆ ಸಂಜೆ ನೀನು ಸ್ಕೂಲಿನಿಂದ ಬರೋಅಷ್ಟರಲ್ಲಿ ಏನಾದರೂ ಗಿಫ್ಟ್ ತಂದಿರುತ್ತೇನೆ . "ಎಂದೆ. ಮಾರನೇ ದಿನ ಸ್ಕೂಲಿಗೆ ಹೋಗುವಾಗ ,ಗಿಫ್ಟ್ ತರೋದನ್ನ ಮರಿಬೇಡ ಎಂದು ನನ್ನನ್ನು ಎಚ್ಚರಿಸಿ ಸ್ಕೂಲಿಗೆ ಹೋದ . ಸರಿ,ಅವನನ್ನು ಸ್ಕೂಲಿಗೆ ಕಳುಹಿಸಿ ,ನಾನು ನನ್ನ ಮನೆಗೆಲಸದಲ್ಲಿ ಬ್ಯುಸಿ ಆದೆ .  ಸಾಯಂಕಾಲ ೪. ೩೦ ರ ಹೊತ್ತಿಗೆ ,ನನ್ನ ಮಗನ ಎಚ್ಚರಿಕೆಯ ಮಾತು ನೆನಪಾಯಿತು. ಅಯ್ಯೋ ನನ್ನ ಕೆಲಸದ ಗಡಿಬಿಡಿಯಲ್ಲಿ ಮಗನಿಗೆ ಗಿಫ್ಟ್ ತರೋದನ್ನೇ ಮರೆತಿದ್ದೆ. ಅವನು ಸ್ಕೂಲಿನಿಂದ ಬರೋದು ೫ಕ್ಕೆ. ಅರ್ಧ ಗಂಟೆಯಲ್ಲಿ ಏನು ಗಿಫ್ಟ್ ತರೋದು ಅಂತ ಯೋಚಿಸುತ್ತಾ ,ತರಾತುರಿಯಲ್ಲಿ ಅಂಗಡಿಕಡೆ ಹೆಜ್ಜೆ ಹಾಕಿದೆ. ಆ ಅಂಗಡಿಯಲ್ಲಿ ಚಾಕೊಲೇಟ್,ಬಿಸ್ಕೇಟ್,ಇತ್ತು. ಸರಿ,ಬೇರೆಕಡೆ ಹೋಗಿ  ನೋಡೋಣ ಅಂದ್ರೆ ಟೈಮ್ ಇರಲಿಲ್ಲ. ಸರಿ ಕಿಂಡರ್ ಜಾಯ್ ತೊಗೊಂಡ್ರೆ ಖುಷಿ ಆಗಬಹುದೇನೋ ಅಂತ ೩೦ ರೂ. ಕೊಟ್ಟು ೨ ಸಾಸಿವೆ ಕಾಳಿನ ಗಾತ್ರದ ಚಾಕೊಲೇಟ್ ತೊಗೊಂಡ್, ಅಂತು ನನ್ನ ಮಗ ಮನೆ ತಲಪೋವೇಳೆಗೆ ಗಿಫ್ಟ್ ಕೈಯಲ್ಲಿ ಹಿಡಿದು ರೆಡಿಆದೆ. ನನ್ನ ಮನಸ್ಸಿನಲ್ಲಿ ,ನನ್ನ ಮಗ ನಾನು ತಂದ ಗಿಫ್ಟ್ ನೋಡಿ ಭಾರಿ ಖುಷಿ ಪಡುತ್ತಾನೆ ಅಂತ ಯೊಚಿಸುತ್ತಿದ್ದೆ. ಯಾಕಂದ್ರೆ ,ನಾವು ಚಿಕ್ಕವರಿರುವಾಗ ,೫ ಪೈಸೆ ಪೆಪ್ಪರ್ಮೆಂಟ್ ಅನ್ನು ಯಾರಾದರೂ ತಂದುಕೊಟ್ರು ಅದನ್ನು ,ಎಲ್ಲಾರಿಗೂ ಹೇಳಿ ,"ನೋಡೇ ಅಜ್ಜನ ಮನೆ ಮಾವ ಪೆಪ್ಪೆರ್ ಮೆಂಟ್ ತೈನ್ದ. ''ಅಂತ ಎಷ್ಟು ಖುಷಿ ಪಟ್ಕೊಂಡು  ತಿಂತಿದ್ವಿ ಸರಿ ನನ್ನ ಮಗನಿಗೆ ತಗೊಪ್ಪ ನಿನ್ನ ಗಿಫ್ಟ್ ಎಂದು ಕೊಟ್ಟೆ . ಅವನ ಮೊಗದಲ್ಲಿ,ನಗು ಖುಷಿ,ಸಂತೋಷ ,ಆನಂದ,ಯಾವುದೂ ಕಾಣಲಿಲ್ಲ....!!!!!!!ಬದಲಿಗೆ  " ಅಮ್ಮಾ ಕಿಂಡರ್ಜಾಯ್ ಯಾ? ಥ್ಯಾಂಕ್ಸ್ ." ಎಂದು ನೀರಸಭಾವನೆ ಇಂದ ಒಳಗೆ ನಡೆದ . ಹೌದು ,ಈಗಿನ ಮಕ್ಕಳಿಗೆ ಚಿಕ್ಕ ಚಿಕ್ಕ ವಿಷಯಗಳಲ್ಲೂ ಖುಷಿಪಡುವ ಮನೋಭಾವ ಕಡಿಮೆ . ಅವರ ಈ ಸಮಸ್ಯೆಗೆ ಕಾರಣ ಏನೆಂದರೆ ,ಅವರಿಗೆ ಬೇಕಾದ್ದು, ಅವರು ಕೇಳುವ ಮೊದಲೇ ಅವರ ಕೈಸೇರಿರುತ್ತದೆ,ಇಲ್ಲವೇ ಅವರು ಕೇಳಿದ ತಕ್ಷಣ ನಾವು ಕೊಡಿಸುತ್ತೇವೆ .  ಆದ್ದರಿಂದ ,ಮಕ್ಕಳಿಗೆ ಯಾವುದೂ ವಿಶೇಷ ಎನ್ನಿಸುವುದಿಲ್ಲಾ. ನಾವು ಚಿಕ್ಕವರಿರುವಾಗ ಹಬ್ಬ ಬಂತೆಂದರೆ ಭಾರಿ ಖುಷಿ . ಏಕೆಂದರೆ ಹಬ್ಬಕ್ಕೆ ಮಾತ್ರ ಮನೆಮಂದಿಗೆಲ್ಲಾ ಹೊಸಬಟ್ಟೆ ತರುತ್ತಿದ್ದರು ,ಆದರೆ ಈಗ ತಿಂಗಳಿಗೆ ಒಂದು ಜೊತೆ ಹೊಸ ಬಟ್ಟೆ,ಪ್ರತೀದಿನ ಚಾಕೊಲೇಟ್,ವಾರಕ್ಕೊಂದು ಟಾಯ್ಸ್. ಹೀಗಿರುವಾಗ ಮಕ್ಕಳಿಗೆ ಯಾವುದೂ ವಿಶೇಷ ಎನ್ನಿಸುವುದಿಲ್ಲಾ . ಯಾವುದಾದರೂ ವಸ್ತು ಅಪರೂಪಕ್ಕೆ ದೊರೆತಾಗ ಮಾತ್ರ ಅದರಿಂದ ಖುಷಿ ಪಡಲು ಸಾಧ್ಯ .. ..... ಅಲ್ವಾ ನೀವೇನ್ ಅಂತಿರಾ .... 

9 ಕಾಮೆಂಟ್‌ಗಳು:

sunaath ಹೇಳಿದರು...

ಒಂದು ಮನೋವಿಶ್ಲೇಷಣೆಯನ್ನು ಹಾಗು ಒಂದು ಸಾಮಾಜಿಕ ಬದಲಾವಣೆಯನ್ನು ಸರಿಯಾಗಿ ಗುರುತಿಸಿ, ಕ್ಲುಪ್ತವಾಗಿ ನಿರೂಪಿಸಿದ್ದೀರಿ.

ushodaya ಹೇಳಿದರು...

ಧನ್ಯವಾದಗಳು ,ಸುನಾತ್ ಸರ್.

ನಿಮ್ಮೊಳಗೊಬ್ಬ ಬಾಲು ಹೇಳಿದರು...

ನಿಮ್ಮ ಮಾತು ನಿಜ ಐದು ಪೈಸೆ ಪೆಪ್ಪರ್ ಮಿಂಟ್ ಮಜಾ ನೆ ಮಜಾ ಬಿಡಿ, ಶುಂಟಿ ಪೆಪ್ಪರ್ಮಿಂಟ್, ಕಿತ್ತಳೆಹುಳಿ ಪೆಪ್ಪರ್ ಮಿಂಟ್ ಮುಂತಾದವುಗಳೊಂದಿಗೆ ಬೆಳೆದ ಬಾಲ್ಯದ ನೆನಪಾಯಿತು. ಇಂದಿನ ಮಕ್ಕಳ ಬಾಲ್ಯವೇ ಬೇರೆ ಬಿಡಿ, ಅದಕ್ಕೆ ಅವರು ಹೊಣೆ ಅಲ್ಲಾ , ಇಂದಿನ ಹೊಸ ಹೊಸ ಆವಿಷ್ಕಾರಗಳೇ ಕಾರಣ . ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಿದ್ದಾರೆ ಮಕ್ಕಳು

ಚೈತ್ರ ಬಿ . ಜಿ . ಹೇಳಿದರು...

houdu , eegina makkalige bekaddu takshana siguttade..

Dr.D.T.Krishna Murthy. ಹೇಳಿದರು...

ಅದು ನಮ್ಮ ಕಾಲ!!!! ಐದು ಪೈಸೆ ಪೆಪ್ಪರ್ಮೆಂಟ್ ಸಿಕ್ಕರೆ ಸ್ವರ್ಗವೇ ಕೈಗೆ ಸಿಕ್ಕಷ್ಟು ಖುಷಿ ಪಡುತಿದ್ವಿ!!! ಪಾಪ ಈಗಿನ ಮಕ್ಕಳು ಆ ಖುಷಿ ಯಿಂದ ವಂಚಿತರಾಗಿದ್ದಾರಲ್ಲಾ ಎಂದು ಬೇಸರವಾಗುತ್ತದೆ.

ushodaya ಹೇಳಿದರು...

ಧನ್ಯವಾದಗಳು,ಬಾಲು ಸರ್,ಚೈತ್ರ,ಕ್ರಿಶ್ಣಮೂರ್ತೀ ಸರ್.

ಮೌನರಾಗ ಹೇಳಿದರು...

ಬಹುಶಃ ನಾನು ಕೂಡ ಕಿಂಡರ್ ಜಾಯ್ ಗೆ ಖುಷಿ ಪಡುತ್ತಿರಲಿಲ್ಲ ಅನಿಸುತ್ತೆ.. :)
ಚೆನ್ನಾಗಿದೆ ಮೇಡಂ ....
ನೀವು ಹೇಳಿದ್ದು ನಿಜ.. ಬೇಕೆನಿಸಿದ್ದು ತಕ್ಷಣ ಸಿಕ್ಕಿ ಬಿಡುವುದರಿಂದ ನಮಗೆ ಇಂತಹ ಚಿಕ್ಕ ಪುಟ್ಟ ಸಂತೋಷಗಳು ಯಾವಾಗಲು ಮಿಸ್ & ಮಿಸ್... :)

ಪದ್ಮಾ ಭಟ್ ಹೇಳಿದರು...

ಖುಷಿ ಎನ್ನುವುದು ಎಲ್ಲೋ ಒಂದು ಚಿಕ್ಕ ಪುಟ್ಟ ವಸ್ತುವಿನಲ್ಲಿಯೂ ಸಿಕ್ಕಿ ಬಿಡುತ್ತೆ...ಕೆಲವೊಂದು ಬಾರಿ ಎಷ್ಟೇ ದುಬಾರಿಯ ವಸ್ತುವಾದರೂ ಆ ಖುಷಿ ಸಿಗದು...

Chandrashekar Ishwar Naik ಹೇಳಿದರು...

ನೀವು ಹೇಳಿದ ಮಾತು ನಿಜ. ನಾನೂ ಬಾಲ್ಯದಲ್ಲಿ ಐದು ಪೈಸೆಯ ಪೇಪರ್ ಮಿಂಟನ್ನು ತಿಂದು ಖುಶಿ ಪಟ್ಟಿದ್ದೇನೆ. ಈಗ ನನ್ನ ಮಗಳು ಸಾಹಿತ್ಯಳಿಗೂ ಅದೇ ಇಷ್ಟ. ಆದರೆ ಐದು ಪೈಸೆಗೆ ಸಿಗುವುದಿಲ್ಲ, ಐವತ್ತು ಪೈಸೆ.