ಗುರುವಾರ, ಆಗಸ್ಟ್ 16, 2012

ನಾನು ಗಾಡಿ ಓಡಿಸೋದನ್ನ ಕಲಿತ ಪರಿ ಹೀಗಿದೆ.......

ನನಗಾಗ 15 ವರ್ಷ ಇರಬಹುದು.......ಅಪ್ಪ ಒಂದು ಟಿ .ವಿ.ಎಸ್ ಅನ್ನು ಹೊಸದಾಗಿ ಕೊಂಡುಕೊಂಡಿದ್ದರು.ನಮಗೆಲ್ಲಾ ಭಾರಿ ಸಂತೋಷ...ಏಕೆಂದರೆ ,ಅದು ಚಿಕ್ಕ ಗಾಡಿ,ಯಾರು ಬೇಕಾದರೂ ಓಡಿಸಬಹುದು ಅಂತ.ಸರಿ,ಒಂದು ವಾರದಲ್ಲಿ ನನ್ನ ತಮ್ಮ ಓಡಿಸೋದನ್ನು ಕಲಿತೆ ಬಿಟ್ಟ!!!!! ನನಗಾಗ ಭಾರಿ ಅವಮಾನ....ನನ್ನ ತಮ್ಮನೇ ಒಂದುವಾರದಲ್ಲಿ ಓಡಿಸೋದನ್ನ ಕಲಿತ,ನಾನು 2-3ದಿನದಲ್ಲಿಯಾದರೂ ಕಲಿಯಲೇ ಬೇಕು ಎಂದು ನನ್ನ ವಾಹನಾಭ್ಯಾಸವನ್ನು ಶುರು ಮಾಡಿದೆ.ಮೊದಲನೇ ದಿನ ಟಿ .ವಿ.ಎಸ್ ನ್ನು ಮನೆಯಿಂದ ರಸ್ತೆ ವರೆಗೆ ತಳ್ಳಿಕೊಂಡು ಬಂದೆ,ನಂತರ ನಿಧಾನವಾಗಿ ಅದರಮೇಲೆ ಕುಳಿತೆ.ನನ್ನ ತಮ್ಮ ಸ್ಟಾರ್ಟ್ ಮಾಡು ಅಂದ.ನನಗೋ ಮನಸ್ಸಿನಲ್ಲಿ ಭಯ ,ಕೈಕಾಲು ಗಡ  ಗಡ ,ಹೇಳಿಕೊಂಡರೆ ಮರ್ಯಾದೆ ಪ್ರಶ್ನೆ,ಏ ಇದೆಲ್ಲಾ ನನಗೆ ಗೊತ್ತು ಬಿಡೋ,ನೀನೇನೂ ಕಲಿಸೋದು ಬೇಕಾಗಿಲ್ಲ ಎಂದು ಬೀಗುತ್ತಾ ನಿಧಾನವಾಗಿ ಸ್ಟಾರ್ಟ್ ಮಾಡಿದೆ.ಮತ್ತೆ ಆಫ್ ಮಾಡಿದೆ.ನನ್ನ ತಮ್ಮ ,ನಿಧಾನ ಓಡಿಸು ಏನಾಗಲ್ಲ ಅಂದ,ನನಗೆ ಅಷ್ಟರಲ್ಲೇ ನನ್ನ ಕೈ ಕಾಲು ನಡುಕ ಜೋರಾಗಿ ,ನಿಧಾನವಾಗಿ ಗಾಡಿಯಿಂದ ಇಳಿದು,ನನಗೆ ಸ್ವಲ್ಪ ಕೆಲಸವಿದೆ ,ನಾಳೆ ಕಲಿಯುತ್ತೇನೆ ಎಂದು ಸರ ಸರನೆ ಒಳಗೆ ನಡೆದೆ .ನನ್ನ ತಮ್ಮ ಸಿಕ್ಕಿದ್ದೇ ಛಾನ್ಸ್ ಅಂತ 2-3ರೌಂಡ್ ಗಾಡಿ ಓಡಿಸಿ ಒಳಗೆ ತಂದಿಟ್ಟ.ಮರುದಿನ ಮತ್ತೆ ಅದೇ ರಾಗ,ಅದೇ ಹಾಡು ಅಂತಾರಲ್ಲಾ ಹಾಗೆ ಆಯಿತು ...........3ನೇ ದಿವಸ ,ಇವತ್ತು ಏನಾದರೂ ಆಗಲಿ ಗಾಡಿ ಓಡಿಸಲೇ ಬೇಕು ಎನ್ನುವ ತೀರ್ಮಾನಕ್ಕೆ ಬಂದೆ,ಸರಿ ಗಾಡಿ ರಸ್ತೆಗೆ ಇಳಸಿ ಆಯಿತು,ಸ್ಟಾರ್ಟ್ ಮಾಡಿಯೂ ಆಯಿತು,ಮುಂದೆ ಏನಾಯಿತು ಎಂದು ನೀವೇ ಊಹಿಸಿರಬಹುದಲ್ಲಾ .................ಹೌದು,ಗಾಡಿ ಏನೋ ಮುಂದೆ ಹೋಯಿತು,ಆದರೇ ,ಗಾಡಿ ನಿಲ್ಲಿಸಲು ಬ್ರೇಕ್ ಬದಲು ಯಾಕ್ಸ್ಲೆಟ್ರ್ ಕೊಟ್ಟೆ ...ಮುಂದೆ  ಮುಂದೆ ಏನು...ಎದುರಿಗಿದ್ದ ಕರೆಂಟ್ ಕಂಬ ನನ್ನ ಗಾಡಿಯನ್ನು ಹಿಡಿದು ನಿಲ್ಲಿಸಿತ್ತು... ಅಕ್ಕಪಕ್ಕದ ಮನೆಯವರೆಲ್ಲಾ ಓಡಿಬಂದರು,ಕೆಲವರು,ಪೆಟ್ಟಾಯಿತ..ಎಂದರು,ಇನ್ನು ಕೆಲವರು ಕರೆಂಟ್ ಕಂಬ ಮುರಿದು ಹೋಯ್ತಾ ನೋಡ್ರೋ ಅಂತ ಗೇಲಿ ಮಾಡಿದ್ರು..ನನಗೇ ಗಾಯದಿಂದ ಆಗಿದ್ದ ನೋವಿಗಿಂತ ಎಲ್ಲರ ಎದಿರು ಬಿದ್ದದ್ದು ಭಾರಿ ಅವಮಾನ ವಾಗಿತ್ತು...ಏನು ಆಗಿಲ್ಲ,ಏನು ಆಗಿಲ್ಲಾ ಅಂತ ಬೇಗ ಬೇಗ ಒಳಗೆ ನಡೆದೇ...ಹೀಗೆ ,ಸಣ್ಣ ಪುಟ್ಟ ಗಾಯಗಳೊಂದಿಗೆ ವಾಹನಾಭ್ಯ್ಯಾಸ ಮುಗಿಯಿತು.ಅದಕ್ಕೆ ಇವತ್ತಿಗೂ ನಾನು ಗಾಡಿ ಓಡಿಸುತ್ತೇನೆ ಎಂದರೆ,ನಿಮ್ಮ ಮನೆಯ ಹತ್ತಿರ ಕರೆ0ಟ್ ಕ0ಬ ಇದೆಯಾ!!!!!!!!!ಎಂದು ಅಪ್ಪ ಮೊದಲು ನಮ್ಮಮನೆಯವರ ಹತ್ತಿರ ಕೇಳಿಕೊಳ್ಳುತ್ತಾರೆ!!!!!!!!!.....

5 ಕಾಮೆಂಟ್‌ಗಳು:

sunaath ಹೇಳಿದರು...

ಗಾಡಿಪುರಾಣ ಚೆನ್ನಾಗಿದೆ! ಈಗ ಗಾಡಿ ಓಡಿಸುತ್ತಿದ್ದೀರಾ?

ushodaya ಹೇಳಿದರು...

ಧನ್ಯವಾದಗಳು...ನಮ್ಮ ಮನೆಯ ಹತ್ತಿರ ಕರೆ೦ಟ್ ಕ೦ಬ ಇನ್ನೂ ನಿಲ್ಲಿಸಿಲ್ಲಾ!!!!!ಹ..ಹ..ಹ..

balasubramanya ಹೇಳಿದರು...

ಬಾಲ್ಯದ ನೆನಪು ಸುಂದರ ಆಲ್ವಾ, ನಿಮ್ಮ ಅನುಭವ ಚೆನ್ನಾಗಿದೆ.

ಅನಾಮಧೇಯ ಹೇಳಿದರು...

ಹ..ಹ..ಹ..ಹ

ushodaya ಹೇಳಿದರು...

ಧನ್ಯವಾದಗಳು ಬಾಲು ಸರ್...ಮತ್ತು ಅಭಿಜ್ನಾ....