ಭಾನುವಾರ, ಡಿಸೆಂಬರ್ 11, 2011

ಗಣಪತಿಯನ್ನು ನೀರಿನಲ್ಲಿ ಯಾಕೆ ಮುಳುಗಿಸುತ್ತಾರೇ?

ಚೌತಿ ಹಬ್ಬಕ್ಕೆ ಊರಿಗೆ ಹೋದಾಗ ನನ್ನ ಮಗನಿಗೆ ಸ೦ಭ್ರಮವೋ ಸ೦ಭ್ರಮ.ಪಟಾಕಿ ಹೊಡಿಬಹುದಲ್ಲಾ ಅ೦ತ.ನಮ್ಮ ಮನೆಯಲ್ಲಿ ಗಣಪತಿ ಕೂರಿಸುತ್ತಾರೆ.ಸರಿ,ಬೆಳಗ್ಗೆಯಿಂದ ಅಮ್ಮ ,ನಾನು ಎಲ್ರೂ ಅಡುಗೆಮನೆಯ ಕೆಲಸದಲ್ಲಿ,ನನ್ನ ತಮ್ಮ ಪೂಜೆಗೆ ರೆಡಿ ಮಾಡೋದ್ರಲ್ಲಿ ,ಅಜ್ಜ ಮೊಮ್ಮಗ ಪಟಾಕಿ ಹೊಡೆಯೋದ್ರಲ್ಲಿ ನಿರತರಾಗಿದ್ದೆವು.ಪುರೋಹಿತರು ಬಂದರು ,ಪೂಜೆ ಎಲ್ಲಾ ಮುಗಿತು. ಹಬ್ಬದ ಊಟವೂ ಆಯಿತು.ನಂತರ ನಮ್ಮ ಊರಿನಲ್ಲಿ 22  ಮನೆಗಳಿವೆ,ಹೆಚ್ಚು ಕಡಿಮೆ ಎಲ್ಲರ ಮನೆಯಲ್ಲೂ ಗಣಪತಿ ಕೂರಿಸುತ್ತಾರೆ .ನಾವೆಲ್ಲಾ ಎಲ್ಲರ ಮನೆಗಳಿಗೂ ಹೋಗಿ ಗಣಪತಿಯ ದರ್ಶನ ಮಾಡಿ ಬರುವುದು ನಮ್ಮ ಊರಿನ ಪದ್ಧತಿ.ಅದರಂತೆ ಎಲ್ಲರ ಮನೆಗಳಿಗೂ ನಾವು ಹೋಗಿಬಂದೆವು.ಆದಿನ ಸಂಜೆ ಊರಿನವರೆಲ್ಲ ಸೇರಿ ,ನಮ್ಮ ಊರಿನ ಕೆರೆಯಲ್ಲಿ ಗಣಪತಿಯನ್ನು ಮುಳುಗಿಸುವ  ಕಾರ್ಯಕ್ರಮ.ಸರಿ ,ಅವರವರ ಮನೆಯ ಗಣಪತಿಯನ್ನು ಎಲ್ಲರೂ ಕೆರೆಬಳಿ ತೊಗೋ೦ಡೂ ಬಂದರು.ಎಲ್ಲರೂ ಪಟಾಕಿ ಹೊಡೆದೂ ಆಯ್ತು,''ಗಣಪತಿ ಬಪ್ಪ ಮೋರಿಯೋ''ಎಂದು ಕೂಗುತ್ತ ,ಇನ್ನೇನು ಗಣಪತಿಯನ್ನು ಕೆರೆಯಲ್ಲಿ ಮುಳುಗಿಸಬೇಕು ಅನ್ನೋಅಸ್ಟರಲ್ಲಿ ನನ್ನ ಮಗ ಪಟಾಕಿ ಹೊಡೆಯೋದನ್ನು ಬಿಟ್ಟು[ಅವನು ಹೊಡೆಯೊಲ್ಲ,ಪಟಾಕಿ ಹೊಡೆಯೋದನ್ನು ನೋಡ್ತಾನೆ.ಅವನಿಗಿನ್ನೂ ೫ ವರ್ಷ]ಓಡಿಬಂದ ''.ಅಮ್ಮ ಗಣಪತಿನ್ ಯಾಕೆ ಕೆರೆಯಲ್ಲಿ ಮುಳುಗಿಸುತ್ತಾರೆ?ಇಷ್ಟೊತ್ತು ದೇವರು ಅಂತ ಪೂಜೆ ಮಾಡಿದ್ರಿ,ದೇವರನ್ನ ನೀರಿಗೆ ಹಾಕ್ತಾರ?ಗಣಪತಿಗೆ ಚಳಿಯಾಗಿ ಶೀತ ಆಗಲ್ವಾ?ಪಾಪ ಗಣಪತಿ ಎಷ್ಟು ಅಳ್ತಾನೋ ಏನೋ?ಅವರಮ್ಮ ನಿಮಗೆ ಬಯ್ಯೋದಿಲ್ವಾ?ಹೇಳಮ್ಮ ಗಣಪತಿನ್ ಯಾಕೆ ಕೆರೆಗೆ ಹಾಕ್ತಾರೆ? ಅಂದ.ಸರಿ ,ಆ ಹೊತ್ತಿಗೆ ಏನೋ ಒಂದು ಹೇಳಿ ಸುಮ್ಮನಾಗಿಸಿದೆ.ಆದರೆ ಆಮೇಲೆ ನನಗೂ ಅನ್ನಿಸ್ತು ,ಹೌದು ಗಣಪತಿನ ಯಾಕ್ ಮುಳುಗಿಸುತ್ತಾರೆ?ನನಗೂ ಸರಿಯಾದ ಉತ್ತರ ಯಾರಿಂದಲೂ ಸಿಗಲಿಲ್ಲ.ಆದರೆ ನನ್ನ ಮಗ ಒಂದು ದಿನ ಪುರೋಹಿತರು ನಮ್ಮ ಮನೆಗೆ ಬಂದಾಗ ,ಅವರನ್ನೇ ಕೇಳಿದ,''ಭಟ್ರೇ,ಗಣಪತಿನ ಯಾಕೆ ಕೆರೆ ಯಲ್ಲಿ ಮುಳುಗಿಸುತ್ತಾರೆ?''.ಅದಕ್ಕೆ ಪುರೋಹಿತರು,''ಗಣಪತಿ ಗಂಗೆಗೂ ಮಗ ,ಅದಕ್ಕೆ ಅವನ ಅಮ್ಮನ ಜೊತೆ ಅವನನ್ನ ಕಳುಹಿಸೋದು.ಗಂಗೆ ಅಂದರೆ ,ನೀರು ತಾನೇ?ಅದಕ್ಕೆ ಗಣಪತಿನ ನೀರಲ್ಲಿ ಮುಳುಗಿಸೋದು ಗೊತ್ತಾಯ್ತ?''ಅಂದರು.ಆಗ ನನ್ನ ಮಗನಿಗೆ ಸಮಾಧಾನವಾಯಿತು.ಮಕ್ಕಳು ಚಿಕ್ಕವರಾದರೂ ಅವರ ಯೋಚನಾಲಹರಿ ತುಂಬಾ ದೊಡ್ದದಿರುತ್ತದಲ್ವಾ?