ಗುರುವಾರ, ಜುಲೈ 19, 2012

ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳು.

ಕುಂಟಾಬಿಲ್ಲೆ 


ಏ ಕಮಲಾ,ಬಾರೆ ಕುಂಟಾಬಿಲ್ಲೆ ಆಡನಾ.......ರೂಪಾ ಚೌಕಾಕಾರದ ಮನೆ ಹಾಕೇ ,ಅಷ್ಟರಲ್ಲಿ ನೀಲ,ದೇವಿಕ,ಲಲಿತ ಎಲ್ಲರನ್ನೂ ಕರ್ಕೊಂಡ್ ಬರ್ತೀನಿ .


ಸೆಟ್ ಆಟ 

ರವಿ,ಹೋಗೋ ಆಕಡೆ ..ಇದು ಹೆಣ್ಮಕ್ಳು ಆಡೋ ಆಟ ..........ನೀನು ಬುಗುರಿ ಆಡ್ಕೋ ಹೋಗೋ....ಬೇಗ ಬೇಗ ಒಂದೇ ಬಣ್ಣದ ಬಳೆ ಚೂರುಗಳನ್ನ ಜೋಡಿಸೋಣ ಬನ್ರೆ........


ಬುಗುರಿ ಆಟ 

ಏ ಹೋಗ್ರೆ ನಿಮ್ ಜೊತೆ ಯಾರ್ ಆಡಲಿಕ್ಕೆ ಬರ್ತಾರೆ,ನೋಡು ನನ್ನ ಬುಗುರಿ ಹೇಗ್ ತಿರಗ್ತಾ ಇದೆ.ನಿಮ್ಗ್ ಬರತ್ತಾ................ಬುಗುರಿ ತಿರಸಲಿಕ್ಕೆ.

ಗೋಲಿ ಆಟ.

 ಏ ರವಿಯಣ್ಣ ಬಾರೋ........... ಗೋಲಿ ಆಡೋಣಾ ...........ಪ್ಲೀಸ್ .........

ಎತ್ಗಲ್ ಆಟ.

 ಒಬ್ಳೇ ಎತ್ಗಲ್ ಆಡ್ತಾ ಇದೀನಿ .............ಯಾರಾದ್ರು ಜೊತೆಗಿದ್ದಿದ್ರೆ ಎಷ್ಟ್ ಚೆನ್ನಾಗ್ ಇರ್ತಿತ್ತು.ಕಮಲ,ನೀಲಾ ಎಲ್ಲಾ ಎಲ್ಹೊದ್ರು????????????

ಕಣ್ಣಾಮುಚ್ಚಾಲೆ 

ಕಣ್ಣಾಮುಚ್ಚೆ ಕಾಡೆಗೂಡೆ .....ಉದ್ದಿನ ಮೂಟೆ ಉರುಳೇ ಹೋಯ್ತು ...........................................ಕೂಕಾ ......ಕಣ್ ಬಿಟ್ಟೆ......... 


ಮರಕೋತಿ ಆಟ.

 ಏ ಬನ್ರೋ .......ಮರಕೋತಿ ಆಟ ಆಡನ ಅಂತ ಮರ ಹತ್ತಿಸಿ ಹ್ಹೊದೋರು ಎಲ್ಹೊದ್ರೋ ............ನನಗೆ ಭಯ ಆಗ್ತಿದೆ .......ಪ್ಲೀಸ್ ಕೆಳಗಿಳ್ ಸ್ರೋ ............. 

ಚನ್ನೆಮಣೆ 

 ಬಾರೆ ಶ್ರೀಮತಿ ,ಮಕ್ಕಳು ಹೇಗೂ ಹೊರಗಡೆ ಆಡ್ತಾ ಇದಾರೆ.ನಂದೂ ಕೆಲಸ ಮುಗಿತು ,ಇಬ್ಬರೂ ಸ್ವಲ್ಪ ಹೊತ್ತು ಚನ್ನೆಮಣೆ ಆಡಣಾ  ..........ಹೌದೆ  ವತ್ಸಲಕ್ಕ ......ನಂದೂ ಕೆಲಸ ಎಲ್ಲಾ ಮುಗಿತು ...........ಸ್ವಲ್ಪ ಹೊತ್ತು ಆಡಣ ............ಹಾಗಾದ್ರೆ ಶುರುಮಾಡು ಮತ್ತೆ......

                             ಈಗಿನ ಗಣಕ ಯಂತ್ರ ,ದೂರದರ್ಶನದ ಅಬ್ಬರ,ಮಕ್ಕಳ ಮಿತಿಮೀರಿದ ಹೋಂ ವರ್ಕ್ ಗಳ ನಡುವೆ ಈ ಕ್ರೀಡೆಗಳೆಲ್ಲಾ ಮರೆಯಾಗುತ್ತಿರುವುದು ತುಂಬಾ ಬೇಸರದ ಸಂಗತಿಯೇ ಸರಿ.ಹೀಗೆ ಹಳ್ಳಿಯಲ್ಲಿಯೇ ದೊರೆಯುವ ಯಾವುದೇ ರೀತಿಯ ವೆಚ್ಛ ಇಲ್ಲದ,ಬುದ್ದಿಗೆ ಕೆಲಸ ಕೊಡುವ,ದೇಹಕ್ಕೆ ವ್ಯಾಯಾಮ ಉಂಟಾಗುವ,ಮನಸ್ಸಿಗೆ ಆನಂದ ಕೊಡುವ,ಭೇದ ಭಾವ ವಿಲ್ಲದೇ ಎಲ್ಲಾ ಮಕ್ಕಳೂ ಹೊಂದಿಕೊಂಡು ಒಟ್ಟಿಗೇ ಆಡುತ್ತಿದ್ದ ಆಕಾಲವೆಲ್ಲಿ ..................ಮನೆಯಲ್ಲಿಯೇ ಟಿ .ವಿ ,ಗಣಕಯಂತ್ರಗಳ ಮುಂದೆ ಕುಳಿತು ,ಗಂಟೆಗಟ್ಟಲೇ ಸಮಯವನ್ನು ಕಳೆಯುವ ಇಂದಿನ ಮಕ್ಕಳ ಮುಂದಿನ ಭವಿಷ್ಯವನ್ನು ನೀವೇ ಒಮ್ಮೆ ಯೋಚಿಸಿ ನೋಡಿ...........................