ಮಂಗಳವಾರ, ಜುಲೈ 17, 2012

HOOGALU.


ಹೂ ಬಿಟ್ಟ ಗಿಡ ಯಾರನ್ನು ತಾನೇ ಆಕರ್ಷಿಸುವುದಿಲ್ಲಾ?ದೇವರು ಒಬ್ಬ ಮಹಾನ್ ಕಲಾವಿದ ಎನ್ನುವುದಕ್ಕೆ ಬಗೆ ಬಗೆಯ ಈ ಹೂಗಳೇ ಸಾಕ್ಷಿ.ಇಡೀ ಲೋಕವನ್ನು ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿದ್ದಾನೆ.       

ಮಾನವ ಎಷ್ಟೇ ದೊಡ್ಡ ಕಲಾಕಾರ ಎನಿಸಿದರೂ, ದೇವರು ಸೃಷ್ಟಿಸಲಾಗದ ಸುಗಂಧವನ್ನು ಅದರಲ್ಲಿ ಬೆರೆಸಿ,ಎಂಥವರೂ ಮನ ಸೋಲುವಂತೆ ಮಾಡಿದ್ದಾನೆ.ಇಂದು ಹೂಗಳಿಗೇನೂ ಕಡಿಮೆ ಇಲ್ಲ.ನಾನಾ ಬಣ್ಣದ ನಾನಾ ವಿಧದ ಹೂಗಳು ದೊರೆಯುತ್ತವೆ.ಆದರೆ ಮೊದಲಿನ ಹಾಗೆ ಇಂದು ಹೂಗಳನ್ನು ಮುಡಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ ಅಷ್ಟೇ.


ಆದರೆ ಇಂದು ಹೂಗಳು ವ್ಯಾಪಾರ ವಸ್ತುವಾಗಿದೆ.ದೊಡ್ಡ ಉದ್ಯಮವಾಗಿ ಬೆಳೆದಿದೆ[ಪುಷ್ಪೋದ್ಯಮ].ಕೆಲವೊಂದು ಹೂಗಳು ಅ0ದಕ್ಕಷ್ಟೇ ಇದ್ದು ಕಣ್ಣಿಗೆ ಮನಸ್ಸಿಗೆ ಆಹ್ಲಾದವನ್ನು0ಟುಮಾಡುತ್ತದೆ.

ಆದರೆ ನಮ್ಮಲ್ಲಿ ನಿಷ್ಪ್ರಯೋಜಕರೆನಿಸಿದ ಅದೆಷ್ಟೋ ಮಂದಿ ಇತರರಿಗೆ ತೊಂದರೆ ಕೊಡುವುದರ -ಲ್ಲಿಯಾದರೂ ಸಂತೋಷ ಹೊಂದುತ್ತಾರೆ.ಆದರೆ ಹೂಗಳು ಹಾಗಲ್ಲ. ಕೆಲವೊಂದು ಹೂಗಳು ಯಾವುದೇ ಪ್ರಯೋಜನಕ್ಕೆ ಬಾರದೇ ಇದ್ದರೂ ,ತೊಂದರೆಯನ್ನ0ತೂ ನೀಡುವುದಿಲ್ಲ.

ತಾವುಗಳು ಅಲ್ಪಾಯುಷಿಗಳು ಎಂಬ ಅರಿವು ಅವಕ್ಕೆ ಇದ್ದಂತಿದೆ.ಹಾಗಾಗಿಯೇ ಇರುವಷ್ಟು ದಿನ ಇತರರ ಸಂತೋಷಕ್ಕಾಗಿ ಎಂಬಂತೆ ಅವು ಉಳಿದು ಅಳಿಯುತ್ತದೆ.ಧೀರ್ಘಾಯುಷಿ ಎಂದು ಬೀಗುವ ಮನುಷ್ಯ ಈ ಪ್ರಪಂಚದಲ್ಲಿ ಏನೆಲ್ಲಾ ಮಾಡಲು ಸಿದ್ಧನಾಗಿರುತ್ತಾನೆ,ಆದರೇ ಆಗ ಹುಟ್ಟಿ,ಆಗ ಸಾಯುವ ಅದೆಷ್ಟೋ ಹೂಗಳು ಅದರ ಅರಿವೇ ಇಲ್ಲದೆ ಅದೆಷ್ಟು ಮನಗಳನ್ನು ಮುದಗೊಳಿಸುತ್ತದೆ.

ಅಂತಹ ಹೂಗಳ ಮುಂದೆ ಮನುಷ್ಯ ಅದೆಷ್ಟೊಂದು ಸಣ್ಣವನಾಗಿಬಿಡುತ್ತಾನೆ !!!!!!!!!!!!

ನೀವೇ ಯೋಚಿಸಿ.











2 ಕಾಮೆಂಟ್‌ಗಳು:

Ashok.V.Shetty, Kodlady ಹೇಳಿದರು...

ಅರ್ಥಪೂರ್ಣ ಸಾಲುಗಳ ಜೊತೆಗೆ ಸುಂದರ ಪುಷ್ಪಗಳಿಂದ ಅಲಂಕೃತವಾದ ಈ ನಿಮ್ಮ ಲೇಖನ ಸೊಗಸಾಗಿದೆ.

ushodaya ಹೇಳಿದರು...

thank you sir.