ಗುರುವಾರ, ಆಗಸ್ಟ್ 9, 2012

ನಮ್ಮ ದೈನ೦ದಿನ ಬದುಕಿನಿ೦ದ ಮರೆಯಾಗುತ್ತಿರುವ ಪದ ”ನಿಶ್ಯಬ್ಧ”.

ಇತ್ತೀಚಿಗೆ ನಾವೆಲ್ಲಾ ಆಧುನೀಕತೆಗೆ ಒಗ್ಗಿಕೊ೦ಡು ಒಂದು ಪದವನ್ನೇ ಮರೆತು ಹೋಗಿದ್ದೇವೆ .......ಅದು ಯಾವುದು ????? ಅದೇ ''ನಿಶ್ಯಬ್ಧ'' .ಇಂದು ನಾವು ಎಲ್ಲಿ ನೋಡಿದರೂ,ಗಲಾಟೆ ,ಜೋರುಜೋರು ಧ್ವನಿ ,ಮೈಕಾಸುರನ ಹಾವಳಿ ,ವಾಹನಗಳ ಆರ್ಭಟ ,ಕಾರ್ಖಾನೆಗಳ ಕಿರುಚುವಿಕೆ...............ಹೇಳುತ್ತಾ ಹೋದರೆ,ಧಾರಾವಾಹಿಗಳ ರೀತಿ ಮುಗಿಯದ ಕತೆ .ಹೋಗಲಿ ಬಿಡಿ,ಮನೆಯಲ್ಲಾದರೂ ಒಂದು ನಿಮಿಷ ನೆಮ್ಮದಿಯಿಂದ ಇರೋಣ ಎಂದುಕೊಂಡರೆ ,ಅಬ್ಬಬ್ಬಾ .....ಆ ಮಿಕ್ಸಿಯ ಗರ್ ಎನ್ನುವ ಸಂಗೀತ ,ವಾಶಿಂಗ್ ಮಶಿನ್ನಿನ ಹೂಂಕಾರ,ಟಿ.ವಿ.ನಾನೇನು ಕಡಿಮೆ ಅಂತ ತನ್ನದೇ ಆದ ವಿವಿಧ ರೀತಿಯ ಸ್ವರಗಳನ್ನು ,ವಿವಿಧ ರೀತಿಯ ರಾಗಗಳಿಂದ ಮನೆಯೇ ಕಂಪಿಸುವಂತೆ ಹಾಡುತ್ತಿರುತ್ತದೆ .ಅಷ್ಟೇ ಅಲ್ಲದೆ ,ಫ್ಯಾನ್ ಜೋರಾಗಿ ಗಲಾಟೆ ಮಾಡದೇ ಇದ್ದರೂ ,ನಿಶ್ಯಬ್ಧ ಹಾಳು ಮಾಡಲು ಬೇಕಾಗುವಷ್ಟು ಶಬ್ಧವನ್ನಂತೂ ಹೊರಡಿಸುತ್ತದೆ ........ಇದೆಲ್ಲ ಆಯ್ತು ,ಇನ್ನು ಇರೋದೇ ಮಹಾನ್  ಗಲಾಟೆಕಾರ ಹಾಗೂ ಎಲ್ಲೆಂದರಲ್ಲಿ  ಯಾವಾಗ ಅಂದ್ರೆ ಅವಾಗಾ,ವಿವಿಧ ರೀತಿಯ ರಿಂಗಾಯನ ದಿಂದ  ಜನರ ನೆಮ್ಮದಿಯನ್ನು ಹಾಳು ಮಾಡುತ್ತಿರುವ ಜಂಗಮ ಗಂಟೆಗಳು .........ಅಬ್ಬಬ್ಬಾ ಅದೇನ್ ಮ್ಯುಸಿಕ್ ,ಅದೇನ್ ಹಾಡೋ !!!!!!!!ಅದರ ಸುಮಧುರ ಸಂಗೀತ ಅನುಭವಿಸಿದವರಿಗೆ ಗೊತ್ತು .......ಎಲ್ಲ ಮುಗಿತು,ಅನ್ನೋ ಅಷ್ಟರಲ್ಲಿ ಕಾಲಿಂಗ್ ಬೆಲ್ .......ನಾನು ಅವಾಗ್ ಅವಾಗ ಅವಾಜ್ ಹಾಕ್ತಾ ಇರ್ತೀನಿ ಅನ್ನುತ್ತೆ ...ನೋಡಿದ್ರಾ ನಾವು ಪ್ರಶಾಂತತೆಯನ್ನು ಎಷ್ಟು ರೀತಿಯಲ್ಲಿ ಕಳೆದು ಕೊಳ್ಳುತ್ತಿದ್ದೇವೆ ಎಂದು .....ಶಬ್ಧ... ಶಬ್ಧ್ಸ......ಶಬ್ಧಮಯವೀ ಬದುಕು....ಮೊದಲು ಹೀಗಿರಲಿಲ್ಲ....ಮನೆಗಳಲ್ಲಿ ಒ೦ದು ರೀತಿಯ ಶಾ೦ತತೆಯ ವಾತಾವರಣ ಇರುತ್ತಿತ್ತು.ಆದರೆ ಇ೦ದಿನ ದಿನಗಳಲ್ಲಿ ಮೀನಿನ ಹೆಜ್ಜೆಯನ್ನಾದರೂ ಹುಡುಕಬಹುದು ,  ಇ೦ತಹ ಶಾ೦ತತೆಯನ್ನು ಕಾಣುವುದು ಕಷ್ಟವೇ ಸರಿ !!!!ನೂರಾರು ಅನಗತ್ಯ ಶಬ್ಧಗಳನ್ನು ಚಟಗಳಂತೆ ಹಚ್ಚಿಕೊಂಡ ನಮಗೆ ಎಂದೋ ಒಮ್ಮೆ ಇಂತಹ ಏಕಾಂತ ಸಿಕ್ಕಿದಾಗ ಅದು ಬಹುಬೇಗ ಬೋರ್ ಎನ್ನಿಸಿಬಿಡುತ್ತದೆ.ಇವತ್ತು ನಾವು ಶಾಂತವಾಗಿರುವ ''ಮಾನಸ ಸರೋವರ''ಕ್ಕೆ ಅನಗತ್ಯವಾದ ಸದ್ದು ಗದ್ದಲಗಳ ಕಲ್ಲೆಸೆದು ,ನಮ್ಮ ಬದುಕಿನ ಶಾಂತತೆಯನ್ನು ಕಳೆದು ಕೊಂಡಿದ್ದೆವೇನೋ ...ಎಂದು ಭಾಸವಾಗುತ್ತಿದೆ ......


2 ಕಾಮೆಂಟ್‌ಗಳು:

sunaath ಹೇಳಿದರು...

ಈ ಶಬ್ದನರಕವನ್ನು ಚೆನ್ನಾಗಿ ವರ್ಣಿಸಿದ್ದೀರಿ. ಈ ನಾಗರಿಕ ಜಗತ್ತಿನಿಂದ ಓಡಿ ಕಾಡಿಗೆ ಹೋಗಬೇಕು ಎನ್ನಿಸುತ್ತದೆ!

ushodaya ಹೇಳಿದರು...

ಧನ್ಯವಾದಗಳು....ನನ್ನ ಲೆಖನಗಳನ್ನು ಓದಿ ಪ್ರೋತ್ಸಾಹಿಸುತ್ತಿರುವುದಕ್ಕೆ.....