ಸೋಮವಾರ, ಜುಲೈ 23, 2012

ಅದ್ಭುತ ಎಲೆ ಕೀಟಗಳು.


''ಅಮ್ಮಾ.......ಅಮ್ಮಾ .....ಬಾಇಲ್ಲಿ ,ನಿನಗೇನೋ ತೋರ್ಸ್ತೀನ್ ಬೇಗ ಬಾ ಅಮ್ಮಾ.........''.ನಾನು ಅಡುಗೆ ಮನೆಯಲ್ಲಿದ್ದವಳು ಒಂದೇ ಉಸುರಿಗೆ ಓಡಿ ಬಂದು,''ಏನೋ ಅದು ನಿಂದು ಗಲಾಟೆ ,ಏನಿದೇ ....ಬೇಗ ತೋರಿಸು,ನನಗೆ ತುಂಬಾ ಕೆಲಸ ಇದೆ.''ಎಂದೆ .''ಅಮ್ಮಾ ಇಲ್ನೋಡು ಎಲೆಗೆ ಜೀವ ಬಂದು ಓಡಾಡ್ತಾ ಇದೆ!!!!!!!!!!!!!!!!!!''.ಹೌದು ಅವನು ನನಗೆ ತೋರಿಸಿದ್ದು ,ಎಲೆಯನ್ನೇ ಹೋಲುವ ಎಲೆಕೀಟವನ್ನು.ನಂತರ ಅವನಿಗೆ ಅದು ಎಲೆಅಲ್ಲಾ ,ಅದು ಒಂದು ಜಾತಿಯ ಕೀಟಎಂದು ಹೇಳಿದೆ.                                                                                                                                                                                      

ಕೆಲವು ಕೀಟಗಳು ಕಡ್ಡಿಗಳಂತೆ ಕಾಣಿಸುತ್ತವೆ.ಕೆಲವು ಕೀಟಗಳು ಗಿಡದ ಕಾಂಡಗಳು ಮತ್ತು ಮುಳ್ಳುಗಳನ್ನು ಅನುಕರಿಸುತ್ತವೆ.ಆದರೆ ಎಲೆಗಳನ್ನು ನಕಲು ಹೊಡೆಯುವುದರಲ್ಲಿ ಎಲೆಕೀಟಗಳನ್ನು ಮೀರಿಸಿದ ಜೀವಿಯೇ ಇಲ್ಲ ಎನ್ನಬಹುದು.



ಇವು ಎಲೆಗಳ ಆಕೃತಿ  ಮತ್ತು ಬಣ್ಣವನ್ನಷ್ಟೇ ಅಲ್ಲದೇ ಎಲೆಗಳ ನಡುವೆ ಇರುವ ನರಗಳನ್ನು ,ನಡುವೆ ಹುಳುಗಳು ಕಚ್ಚ್ಹಿದ ಗಾಯದ ಗುರುತುಗಳನ್ನೂ ಕೂಡ ಅಕ್ಷರಶಃ ನಕಲು ಹೊಡೆಯುತ್ತದೆ.

ಇವು ಹಸಿರು ಎಲೆಗಳಾಗಿ ಗಿಡಕ್ಕೆ ಜೋತು ಬೀಳುತ್ತವೆ,ಒಣ ಎಲೆಗಳಂತೆ ಗಾಳಿಯಲ್ಲಿ ತೇಲುತ್ತವೆ, ಮುಳ್ಳಿನ ಎಲೆಗಳಂತೆ ಗಿಡಗಳ ಮೇಲೆ ಕುಳಿತುಕೊಳ್ಳುತ್ತವೆ.ಇವು ನೆಲದ ಮೇಲೆ ನಡೆದಾಡುವಾಗಲೂ ಗಾಳಿಗೆ ತೂಗುವ ಎಲೆಗಳಂತೆ ಅತ್ತಿಂದಿತ್ತ ತೂಗುತ್ತ ನಡೆಯುತ್ತದೆ.

ಯಾವ ಪ್ರಾಣಿ ಪಕ್ಷಿಗಳ ಕಣ್ಣಿಗೂ ಗೋಚರವಾಗದಷ್ಟು ನೈಜವಾಗಿರುತ್ತವೆ ಅವುಗಳ ಅಣಕು ಕಲೆ!!!!!!!!!!!!!!!!!!!!.