ಶನಿವಾರ, ಜನವರಿ 28, 2012

”ವ್ರುದ್ಧಾಶ್ರಮ”ಗಳಾಗಿ ಮಾರ್ಪಾಡು ಹೊ೦ದುತ್ತಿರುವ ಹಳ್ಳಿಗಳು.

ಹಳ್ಳಿಗಳೇ  ಭಾರತದ ಬೆನ್ನೆಲಬು.ಆದರೆ ಇಗ ಹಳ್ಳಿಗಳಲ್ಲಿ ವಾಸಿಸುವ ಜನರು ಉದ್ಯೋಗ ಅರಸಿ ಪಟ್ಟಣ ಸೇರಲು ಪ್ರಾರಂಭಿಸಿದ ನಂತರ ಹಳ್ಳಿಗಳು ವ್ರುದ್ಧಾಶ್ರಮಗಳಾಗಿ ಮಾರ್ಪಾಡು ಹೊಂದುತ್ತಿದೆ.ಇಗ ಓದಲಿ,ಓದದೆ ಇರಲಿ ಜನರು ಉದ್ಯೋಗಕ್ಕಾಗಿ ಪಟ್ಟಣ ಸೇರುತ್ತಿರುವುದನ್ನು ಕಾಣಬಹುದಾಗಿದೆ.ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಕೃಷಿ ಮಾಡುವವರಿಲ್ಲದೆ,ನಾವು ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗಬಹುದು.                                       ನಾವೂ ಕೂಡ ನಮ್ಮ ಮಕ್ಕಳು ಇಂಜಿನಿಯರ್,ಡಾಕ್ಟರ ಆಗಬೇಕು ಅಂತ ಬಯಸುತ್ತೆವೆಯೇ ಹೊರತು,ನನ್ನ ಮಗ ಒಬ್ಬ ಕೃಷಿಕ ನಾಗಲಿ ಅಂತ ಬಯಸುವುದಿಲ್ಲ.ಆದರೆ ವಿದ್ಯಾವಂತರು ಕೃಷಿಯಲ್ಲಿಯೇ ಏನಾದರೂ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಬಹುದು.ಹಾಗಂತ ಪಟ್ಟಣಗಳೆ ಬೇಡ,ಪಟ್ಟಣದಲ್ಲಿ ಉದ್ಯೋಗವನ್ನೇ ಮಾಡಬಾರದು ಅಂತ ಅಲ್ಲ.ಭಾರತ ಅಭಿವೃದ್ಧಿ ಹೊಂದಲು ಕೈಗಾರಿಕೆಗಳೂ ಅಷ್ಟೇ ಮುಖ್ಯ.ಆದರೆ ಎಲ್ಲರೂ ಕೈಗಾರಿಕೆಗಳಲ್ಲಿಯೇ ದುಡಿಯುವವರಾದರೆ ,ಕೃಷಿಯ ಗತಿ ಏನು?ಅತಿಯಾದರೆ ಅಮೃತವೂ ವಿಷವಾಗುತ್ತದೆ.           ಇತ್ತೀಚಿಗೆ ನಾವು ಯಾವುದೇ ಹಳ್ಳಿಗಳಲ್ಲಿ ಕಾಣಬಹುದಾದ ಬಹು ಮುಖ್ಯ ಅಂಶ ಎಂದರೆ ,ಹಳ್ಳಿಗಳು ವೃದ್ಧಾಶ್ರಮ ಗಳಾಗುತ್ತಿರುವುದು.ಯಾವುದೇ ಮನೆಯಲ್ಲಿ ಕೇಳಿದರೂ ,"ನನ್ನ ಮಕ್ಕಳು ಪಟ್ಟಣದಲ್ಲಿದ್ದಾರೆ,ನನ್ನ ಮಗವಿದೇಶದಲ್ಲಿರೋದು,ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಇಬ್ಬರೇ ಇರೋದು "ಅಂತಾರೆ.ಮೊದಲೆಲ್ಲ ಮಕ್ಕಳು, ಮೊಮ್ಮಕ್ಕಳ ಜೊತೆ ಹಾಯಾಗಿ ತಮ್ಮ ಮುಸ್ಸಂಜೆಯ ಜೀವನವನ್ನು ಸಾಗಿಸುತ್ತಿದ್ದವರು,ಇಂದು ಏಕಾಂಗಿಯಾಗಿ ತಮ್ಮ ಕೊನೆಗಾಲವನ್ನು ಕಳೆಯುವಂತಹ ಪರಿಸ್ತಿತಿ ಬಂದೊದಗಿದೆ.ತಮ್ಮ ಮಕ್ಕಳು ,ತಮ್ಮ ಕೊನೆಗಾಲದಲ್ಲಿ ತಮಗೆ ಆಸರೆಯಾಗಿರುತ್ತಾರೆ ಎಂಬ ಕಿಂಚಿತ್ ಆಸೆಯನ್ನು ತಂದೆ ತಾಯಿ ಇಟ್ಟುಕೊಳ್ಳುವಂತಿಲ್ಲ.ಎಷ್ಟೋ ಮಕ್ಕಳಿಗೆ ತಮ್ಮ ತಂದೆ ತಾಯಿಯ ಅಂತ್ಯಸಂಸ್ಕಾರಕ್ಕೂ ಬರಲು ಆಗುವುದಿಲ್ಲ.ಏಕೆಂದರೆ ,ಅವರು ವಿದೇಶದಲ್ಲಿರುತ್ತಾರಲ್ಲ.!!!!!!!!!!