ಭಾನುವಾರ, ಜುಲೈ 15, 2012

MAGU KALISIDA PAATA.

''ನಿಮಗೆ ಗೊಂಬೆಗಳು ಅಂದ್ರೆ  ಇಷ್ಟಾನ ? ''ಪುಟಾಣಿ  ಹುಡುಗಿಯೊಂದು ಮನೆಗೆ ಬಂದಿದ್ದ  ಅತಿಥಿಯನ್ನು ಕೇಳಿದಳು .''ಹೌದು ತುಂಬಾ ಇಷ್ಟ .''ಅತಿಥಿ ಹೇಳಿದರು .ಕೂಡಲೇ ಆ ಪುಟಾಣಿ ತನ್ನ ಕೋಣೆಗೆ ಓಡಿಹೋಗಿ, ತನ್ನ ಗೊಂಬೆಗಳ ರಾಶಿಯನ್ನೇ ತಂದು ಅತಿಥಿಗಳ ಎದುರಿಗೆ ಇಟ್ಟಳು.''ಈ ಗೊಂಬೆಗಳಲ್ಲಿ ನಿನಗೆ  ತುಂಬಾ ಪ್ರಿಯವಾದ ಗೊಂಬೆ ಯಾವುದು?''ಎಂದು ಅತಿಥಿ ಪುಟಾಣಿಯನ್ನು ಕೇಳಿದರು.ಪುಟಾಣಿ ,ಮೂಗು ಮುರಿದಿದ್ದ ,ಒಂದು ಕಾಲು ಒಂದು ಕೈ ಮುರಿದಿದ್ದ ಬೊಂಬೆಯೊಂದನ್ನು ಆ ರಾಶಿಯಿಂದ ಹೊರಕ್ಕೆ ತೆಗೆದು ಅತಿಥಿಗೆ ತೋರಿಸುತ್ತಾ ,''ಇದು'' ಎಂದಳು.ಆ ಅತಿಥಿ ಆಶ್ಚರ್ಯದಿಂದ ''ಏಕೆ''? ಎಂದು ಕೇಳಿದ.''ಏಕೆಂದರೆ ಇದನ್ನು ನಾನು ಪ್ರೀತಿಸದಿದ್ದರೆ ಇನ್ಯಾರು ಪ್ರಿತಿಸುತ್ತಾರೆ?''ಎಂದು ಅಭಿಮಾನದಿಂದ ಹೇಳಿದಳು.ಅತಿಥಿಗೆ ಆ ಪುಟ್ಟ ಮಗು ಅತಿದೊಡ್ಡ ಪಾಠ ಕಲಿಸಿತ್ತು .ಪ್ರೀತಿ ಎಲ್ಲರಿಗೂ ಬೇಕಾದರೂ ದುಃಖಿಗಳಿಗೆ
ಅಸಹಾಯಕರಿಗೆ,ರೋಗಿಗಳಿಗೆ,ವಿಕಲಾಂಗರಿಗೆ ಅದರ ಅವಶ್ಯಕತೆ ಇತರರಿಗಿಂತ ಹೆಚ್ಚಾಗಿರುತ್ತದೆ.ನಿಸ್ವಾರ್ಥ ಪ್ರೀತಿಯಲ್ಲಿ ಕೇವಲ ಅದನ್ನು ಕೊಡುವ ಭಾವನೆ ಮಾತ್ರ ಇರುತ್ತದೆ,ಹಿಂದಕ್ಕೆ ಪಡೆಯುವ ಆಕಾಂಕ್ಷೆ ಇರುವುದಿಲ್ಲ.ಇಲ್ಲಿ ಈ ಪುಟಾಣಿ ಎಲ್ಲಾ ಗೊಂಬೆಗಳಲ್ಲಿ ವಿಕಲಾಂಗವಾದ ,ಬೇರೆ ಯಾರೂ ಇಷ್ಟಪಡ ದಂತಹ ಗೊಂಬೆಯನ್ನೇ ಇಷ್ಟಪಟ್ಟಳು.ಇದೇ ಪರಿಶುದ್ಧ ಪ್ರೀತಿ ಆಲ್ವಾ?