ಶನಿವಾರ, ಡಿಸೆಂಬರ್ 17, 2011

ದೇಶದ ಪ್ರಗತಿಯಲ್ಲಿ ಮಹಿಳೆಯ ಪಾತ್ರ.

ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹುಡುಗಿ .ಹಳ್ಳಿಯಲ್ಲಿ ಸಾಮಾನ್ಯವಾಗಿ ಕೆಲಸ ಮುಗಿದ ಮೇಲೆ ಅಕ್ಕಪಕ್ಕದ ಮನೆಯವರೆಲ್ಲ ಸೇರಿಕೊಂಡು ಹರಟೆ ಹೊಡೆಯುವುದು  ಸಾಮಾನ್ಯ.ಆದರೆ ಈಗ ಹಾಗೇನಿಲ್ಲ ಬಿಡಿ. ಯಾಕಂದ್ರೆ ಸಾಮಾನ್ಯವಾಗಿ ಸಂಘಗಳು [ಮಹಿಳಾ ಸಂಘಗಳು] ಜಾರಿಗೆ ಬಂದಮೇಲೆ ಪ್ರತಿಯೊಬ್ಬ ಮಹಿಳೆಗೂ ಒಂದು ನಿಮಿಷವೂ ಬಿಡುವಿಲ್ಲದ ಕೆಲಸವಿರುತ್ತದೆ.ಮನೆಗೆಲಸ,ತೋಟದಕೆಲಸ ಎಲ್ಲಾ ಮುಗಿದ ಮೇಲೆ ಸಂಘದ ಕೆಲಸ.ಹೀಗೆ ಮಹಿಳೆಯರು ಸ್ವಯಂ ಉದ್ಯೋಗವನ್ನು ಕಂಡುಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.ಇದಿಷ್ಟು ಹಳ್ಳಿಯಲ್ಲಿನ ಮಹಿಳೆಯರ ಸ್ತಿತಿಗತಿಯಾದರೆ,ಪಟ್ಟಣದಲ್ಲಿನ ಮಹಿಳೆಯರು ಸಾಮಾನ್ಯಾವಾಗಿ ಉದ್ಯೋಗಿಗಳಾಗೆ ಇರುತ್ತಾರೆ.ಇನ್ನು ಕೆಲವರು ಉದ್ಯೋಗ ಮಾಡದೆ ಇದ್ದರೂ ,ಸಂಗೀತ ಕಲಿಯೋದು,ಡಾನ್ಸ್ ಕಲಿಯೋದು,ಕಂಪ್ಯೂಟರ್ ಕಲಿಯೋದು,ಟೈಲರಿಂಗ್ ........................ಬೇಕಾದಷ್ಟು ಕೋರ್ಸ್ ಗಳಿರುತ್ತದಲ್ಲಾ ಅದರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ,ಅದನ್ನು ಕಲಿಯೋದರಲ್ಲಿ ತಮ್ಮಬಿಡುವಿನ ವೇಳೆಯನ್ನು ಸಮರ್ಪಕವಾಗಿ ಕಳೆಯುತ್ತಾರೆ. ಆದರೆ ,ಪಟ್ಟಣದಲ್ಲಿ ಹೀಗೆ ನಾನಾತರಹದ ಅವಕಾಶಗಳಿದ್ದರೂ ,ಯಾವುದನ್ನೂ ಉಪಯೋಗಿಸಿಕೊಳ್ಳದೆ ಕೇವಲ ಧಾರಾವಾಹಿಗಳನ್ನು ನೋಡುವುದು,ಆಕಡೆ ಇಕಡೆ ಮನೆಯವರ ಸುದ್ದಿ ಮಾತನಾಡುತ್ತಾ ,ಹರಟೆ ಹೊಡೆಯುತ್ತಾ  ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿಕೊಂಡು ,ಸುಮ್ಮನೆ ದಿನ ದೂಡುವವರೂ ಇದ್ದಾರೆ.ಮೊನ್ನೆ ನಮ್ಮ ಯಜಮಾನರು ಚೀನಾಕ್ಕೆ ಹೋಗಿಬಂದವರು ಹೇಳುತ್ತಿದ್ದರು,ಅಲ್ಲಿ ಪ್ರತಿಯೊಂದು ಕೆಲಸದಲ್ಲಿಯೂ ಮಹಿಳೆಯರೇ ಮುಂದು.ದಿನದಲ್ಲಿ ಒಂದೊದು ನಿಮಿಷವನ್ನೂ ಅವರು ದುಡಿಯುವುದಕ್ಕಾಗಿಯೇ ಮೀಸಲಿಡುತ್ತಾರೆ.ಅಲ್ಲಿ ಸೋಮಾರಿಗಳು ಭಾರಿ ಕಡಿಮೆ.ಆದ್ದರಿಂದಲೇ,ಅಲ್ಲಿ ಅಷ್ಟೊಂದು ಜನಸಂಕ್ಯೆ ಇದ್ದರೂ ಕೂಡ ಆ ದೇಶ ಅಷ್ಟೊಂದು ಮುಂದುವರಿಯಲು ಕಾರಣವಾಗಿದೆ.ಆದರೆ ನಮ್ಮ ದೇಶದಲ್ಲಿ ,ದುಡಿಯುವವರು ಒಬ್ಬರು ,ಕೂತು ತಿನ್ನುವವರು ನಾಲ್ಕು ಮಂದಿ.ಆದರೆ ,ನಮ್ಮ ದೇಶದಲ್ಲೂ ಮಹಿಳೆಯರು  ಹೆಚ್ಚು ವಿದ್ಯ್ಯಾವನ್ಥರಾಗಿ,ಬೇರೆವಿಶಯಗಳನ್ನು ಚರ್ಚಿಸುವುದರ ಬದಲು.ನಮ್ಮಿಂದ ನಾವು ಹುಟ್ಟಿದ  ಈ ನಾಡಿಗೆ ಏನಾದರೂ ಅಲ್ಪ ಸೇವೆಯನ್ನಾದರೂ ಸಲ್ಲಿಸಲು ಸಾಧ್ಯವೇ?ಎಂಬ ಒಂದು ಚಿಕ್ಕ ಆಲೋಚನೆ ಯನ್ನು ಮಾಡಿದರೂ ನಮ್ಮ ದೇಶ ಮುಂದುವರಿದ ದೇಶ ಆಗುವುದರಲ್ಲಿ ಅನುಮಾನವೇ ಇಲ್ಲ.

9 ಕಾಮೆಂಟ್‌ಗಳು:

ಅನಂತ್ ರಾಜ್ ಹೇಳಿದರು...

ಉತ್ತಮ ಚಿ೦ತನೆಯನ್ನು ಸಾದರ ಪಡಿಸಿದ್ದೀರಿ. ಈ ದಿಸೆಯಲ್ಲಿ ಸಾಕಷ್ಟು ಮಹಿಳಾಸ೦ಘಗಳು ಕಾರ್ಯಗತವಾಗಿವೆ ಎನ್ನುವುದು ನನ್ನ ಅನಿಸಿಕೆ. ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಉದ್ಯೋಗಸ್ತ ಮಹಿಳೆಯರ ಸ೦ಖ್ಯೆ ಹೆಚ್ಚು ಇರುವುದರಿ೦ದ ಸ೦ಘಗಳಿಗೆ ತಮ್ಮ ಸಮಯವನ್ನು ಕೊಡುವುದು ಸ್ವಲ್ಪ ಕಷ್ಟಸಾಧ್ಯ ಇರಬಹುದು. ಆದರೂ ಗೃಹಿಣಿಯರು(housewife)ತಮ್ಮ ಸಮಯವನ್ನು ಇ೦ತಹ ಚಿ೦ತನೆಗಳಿಗೆ ತೊಡಗಿಸಿಕೊ೦ಡಲ್ಲಿ ದೇಶದ ಪ್ರಗತಿಗೂ ಇವರು ತಮ್ಮ ಅಮೂಲ್ಯ ಸೇವೆಯನ್ನು ನೀಡಬಹುದು ಅನಿಸುತ್ತದೆ. ಅಭಿನ೦ದನೆಗಳು.

ಅನ೦ತ್

ushodaya ಹೇಳಿದರು...

ನಿಮ್ಮ ಪ್ರತಿಕ್ರಿಯೆಗೆ ನನ್ನ ಅನ೦ತ ಧನ್ಯವಾದಗಳು ಸರ್.

ಸುಮ ಹೇಳಿದರು...

ಉಷಾ ...ನಿನ್ನ ಬ್ಲಾಗ್ ಇವತ್ತು ನೋಡಿದೆ . ಹೀಗೆ ಬರೆಯುತ್ತಿರು :)

ushodaya ಹೇಳಿದರು...

ಸುಮಕ್ಕ ನಿನ್ನ ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು.

pravara kottur ಹೇಳಿದರು...

ನಿಮ್ಮ ಬ್ಲಾಗ್ ಅನ್ನು ಓಪನ್ ಮಾಡುವುದಕ್ಕೆ ಖುಶಿಯಾಗುತ್ತದೆ...... ಬರಹ ಮತ್ತು ಬ್ಲಾಗ್ ಸುಂದರವಾಗಿದೆ....

prabhamani nagaraja ಹೇಳಿದರು...

ನಿಮ್ಮ ಬರವಣಿಗೆಯ ಶೈಲಿ ಚೆನ್ನಾಗಿದೆ. ಉತ್ತಮ ಪ್ರಯತ್ನ. ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಭೇಟಿ ನೀಡಿ follower ಆಗಿದ್ದಕ್ಕಾಗಿ ಧನ್ಯವಾದಗಳು.

ushodaya ಹೇಳಿದರು...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ವಿ.ರಾ.ಹೆ. ಹೇಳಿದರು...

ನಿಜ, ನಾನೂ ಹೀಗೇ ಯೋಚಿಸುತ್ತಿರುತ್ತೇನೆ. ನಮ್ಮ ದೇಶದಲ್ಲಿ ಎಷ್ಟೆಲ್ಲಾ ಪ್ರತಿಭೆ ಇರುವ ಬುದ್ದಿಶಕ್ತಿ ಸಾಮರ್ಥ್ಯವಿರುವ ಮಹಿಳೆಯರಿದ್ದಾರೆ. ದೇಶದ ಜನಸಂಖ್ಯೆ ಅರ್ಧಭಾಗದಷ್ಟಿರುವ ಮಹಿಳೆಯರಲ್ಲಿ ೯೦% ಸಾಮರ್ಥ್ಯ ವ್ಯರ್ಥವಾಗಿ ಹೋಗುತ್ತಿದೆ. ಗ್ರಾಮೀಣ ಮಹಿಳೆಯರಿಗಿಂತ ಪಟ್ಟಣ-ನಗರ ಪ್ರದೇಶದ ಮಹಿಳೆಯರೇ ತಮಗೆ ಅವಕಾಶವಿದ್ದಾಗಿಯೂ ಅದನ್ನು ಬಳಸುಕೊಳ್ಳುವುದರಲ್ಲಿ ಹಿಂದಿದ್ದಾರೆ. ಅದಕ್ಕೆ ಕಾರಣಗಳು ನೀವು ಹೇಳಿದ್ದೇ ಆಗಿವೆ.

ಚೈತ್ರ ಬಿ . ಜಿ . ಹೇಳಿದರು...

chennagidddu uhakka..