ಬುಧವಾರ, ಆಗಸ್ಟ್ 29, 2012

ಬಾಲ್ಯದಲ್ಲಿ ನಾವು ತಿ೦ದ ಕೆಲವು ಹಣ್ಣುಗಳ ಸಿಹಿ ನೆನಪು.....

ನಾವು ಹುಟ್ಟಿ ಬೆಳೆದದ್ದೇ ಹಳ್ಳಿಯಲ್ಲಿ....ಹಾಗೆಯೇ ನಮ್ಮ ವಿದ್ಯಾಭ್ಯಾಸವೂ ಕೂಡ ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ.ಈಗಿನ ನಮ್ಮ ಮಕ್ಕಳಂತೆ ಅವಾಗ ನಮಗೆ ಕಾರ್,ಬೈಕ್,ಬಸ್ಸುಗಳಲ್ಲಿ ಶಾಲೆಗೆ ಹೋಗುವ ಪದ್ಧತಿ ಗೊತ್ತಿರಲಿಲ್ಲ..ಹಾಗೆಯೇ ನಾವು 5ರಿಂದ 6 ಕಿ.ಮಿ.ಒಳದಾರಿಯಲ್ಲಿ ನಡೆದುಕೊಂಡೇ ಹೋಗುತ್ತಿದ್ದೆವು.ಆವಾಗಿನ ಮಜವೇ ಬೇರೆ ಬಿಡಿ .ನಾವು ನಡೆದುಕೊಂಡು ಹೋಗುವಾಗ ದಾರಿಯ ಮಧ್ಯೆ ಸಿಗುವ ನೇರಳೆ ಹಣ್ಣು,ಕೌಳಿ ಕಾಯಿ,ಗುಡ್ಡೆ ಗೇರ್ ಹಣ್ಣು,ಸಂಪಿಗೆ ಹಣ್ಣು,ನೆಲ್ಲಿಕಾಯಿ,ಮುಳ್ ಹಣ್ಣು,ಸಳ್ಳೆ ಹಣ್ಣು,ಪುನ್ನೇರಳೆ ಹಣ್ಣು,ಹಾಂ...ಮರೆತಿದ್ದೆ ,ಪೇರಳೆ ಹಣ್ಣು ....ಅಬ್ಬಬ್ಬಾ ಎಷ್ಟೆಲ್ಲಾ ವೆರೈಟಿ ಹಣ್ಣುಗಳನ್ನು ಫ್ರೆಶ್ ಆಗಿ , ಫ್ರೀಯಾಗಿ,ಎಷ್ಟುಬೇಕೋ ಅಷ್ಟು ,ತೃಪ್ತಿ ಆಗುವವರೆಗೂ ತಿನ್ನುತಾ ಶಾಲೆಗೇ ಹೋಗುತ್ತಿದ್ದೆವು.ಆದರೆ ಈಗ ನಮ್ಮ ಮಕ್ಕಳಿಗೆ ಕೆಜಿ ಗೆ 100ರೋ 150ಕೊಟ್ಟುಸೇಬು,ಮೂಸುಂಬೆ,ಸಪೋಟ,ದಾಳಿಂಬೆ ಹೀಗೆ ದುಡ್ಡು ಕೊಟ್ಟು ,ಹಣ್ಣಿನ ಜೊತೆ ಕಾಯಿಲೆಯನ್ನೂ ತಂದು ಕೊಡುತ್ತೇವೆ!!!!!!ಏಕೆಂದರೆ ಎಲ್ಲಾ ಹಣ್ಣುಗಳನ್ನೂ ಸಾಮಾನ್ಯವಾಗಿ ಇಂಜೆಕ್ಟ್ ಮಾಡಿ ಹಣ್ಣು ಮಾಡಲಾಗಿರುತ್ತದೆಯಲ್ಲಾ......ನಮಗೆ ಆದಿನಗಳಲ್ಲಿ ಕಾಡು ಹಣ್ಣು ತಿಂದರೂ ಏನೂ ಆಗುತ್ತಿರಲಿಲ್ಲಾ.....ಆದರೆ ನಮ್ಮ ಮಕ್ಕಳಿಗೆ ಸೇಬು ತಿಂದರೆ ಕಫಾ..ಆಗುತ್ತೆ,ಕಿತ್ತಳೆ ತಿಂದರೆ ಶೀತ ಆಗುತ್ತೆ,ಪೇರಳೆ ತಿನ್ನಲು ಕೊಟ್ಟರೆ ಹಲ್ಲು ನೋವು ಬರುತ್ತೆ...ಈಗಿನ ಮಕ್ಕಳು ಎಷ್ಟರ ಮಟ್ಟಿಗೆ ಗಟ್ಟಿ  ಇರುತ್ತಾರೆ ನೀವೇ ಒಮ್ಮೆ ಯೋಚಿಸಿ....ಅಪ್ಪ ಯಾವಾಗಲೂ ಹೇಳುತ್ತಿದ್ದರು,ನಿಂಗಳ ವಯಸ್ಸಿನಲ್ಲಿದ್ದಾಗ ನಂಗ ಕಲ್ಲನ್ನೂ ತಿಂದು ಜೀರ್ಣಿಸಿ ಕೊಳ್ತಿದ್ಯಾ..ಅಂದರೆ ಆವಾಗಿನವರು ಅಷ್ಟು ಗಟ್ಟಿ.. ಒಂದೊಂದು ಹಲಸಿನ ಇಡೀ ಹಣ್ಣನ್ನು ಒಬ್ಬರೇ ತಿನ್ನುತಿದ್ದರು!!!!ಆದರೆ ಈಗಿನ ಮಕ್ಕಳು 2ಸೊಳೆ ಹಲಸಿನ ಹಣ್ಣು  ತಿಂದರೆ ಡೀಸೆಂಟರಿ ಸ್ಟಾರ್ಟ್ ಆಗತ್ತೆ :) :) :)

7 ಕಾಮೆಂಟ್‌ಗಳು:

ದಿನಕರ ಮೊಗೇರ ಹೇಳಿದರು...

eegina generation haagide...idakke namma aahaara paddatiyu kaaraNa irabahudu...

uttama lekhana..

Ashok.V.Shetty, Kodlady ಹೇಳಿದರು...

ನಿಮ್ಮ ಬರಹ ನಾನು ಶಾಲೆಗೆ ಹೋಗುತಿದ್ದ ದಿನಗಳನ್ನು ನೆನಪಿಸಿತು. ಶಾಲೆಗೆ ೭-೮ ಕಿಲೋ ಮೀಟರ್ ನಡೆದುಕೊಂಡು ಹೋಗುತಿದ್ದ ನಾವು ನಿಮ್ಮ ಹಾಗೆ ಮಾಡುತಿದ್ದೆವು....ನಿಜವಾಗಿಯೂ ಆ ನೆನಪುಗಳು ಮಧುರ.....

ಉತ್ತಮ ಬರಹ....ಧನ್ಯವಾದಗಳು....

ushodaya ಹೇಳಿದರು...

ಧನ್ಯವಾದಗಳು..ದಿನಕರ್ ಸರ್,ಹಾಗೂ ಅಶೋಕ್ ಸರ್..

ramesh kangod ಹೇಳಿದರು...

ಸರಿ ಉಷಕ್ಕ,ಹಣ್ಣೂ,ಆತು,ಆಗಿನ ಆಟವೂಇಲ್ಲೆ,ಮತ್ತೆ ಮಳೆಗಾಲದಲ್ಲಿ ಅರ್ಲಗೆ ಆಡಿದ್ದು ಬರೆಯಲ್ಲೆ? ಹ್ ಹಾ

Dileep Hegde ಹೇಳಿದರು...

ಈಗ್ಲೂ ಬೇಸಿಗೆ ದಿನಗಳಲ್ಲಿ ಊರಿಗೆ ಹೋದ್ರೆ ಬ್ಯಾಣಕ್ಕೊಂದು ವಿಸಿಟ್ ಗ್ಯಾರಂಟೀ.. ಹಣ್ಣುಗಳ ಜೊತೆ ಬಾಲ್ಯವನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು..

ಮೌನರಾಗ ಹೇಳಿದರು...

ನಾವುಗಳು ಎರಡು ಕಿಲೋಮೀಟರ್ ಗಳಷ್ಟು ನಡೆಯುತ್ತಿದ್ದು, ಇಂತಹ ಹಣ್ಣುಗಳ ಆನಂದ ನಮಗೂ ಪ್ರಾಥಮಿಕ ಶಾಲಾ ಹಂತದಲ್ಲಿ ಸಿಕ್ಕಿದ್ದು ಅದೃಷ್ಟ...

ಪದ್ಮಾ ಭಟ್ ಹೇಳಿದರು...

ಆ ಬಾಲ್ಯವೆಂದರೆ ಅದೆಷ್ಟು ಮಜ..ಅಂದಿನ ಬಾಲ್ಯದ ಮಜಕ್ಕೂ ಇಂದಿನ ಬಾಲ್ಯಕ್ಕೂ ಅದೆಷ್ಟು ವ್ಯತ್ಯಾಸ ಅಲ್ವಾ..ತುಂಬಾ ಚಂದವಾದ ಬರಹ..