ಶನಿವಾರ, ಜನವರಿ 28, 2012

”ವ್ರುದ್ಧಾಶ್ರಮ”ಗಳಾಗಿ ಮಾರ್ಪಾಡು ಹೊ೦ದುತ್ತಿರುವ ಹಳ್ಳಿಗಳು.

ಹಳ್ಳಿಗಳೇ  ಭಾರತದ ಬೆನ್ನೆಲಬು.ಆದರೆ ಇಗ ಹಳ್ಳಿಗಳಲ್ಲಿ ವಾಸಿಸುವ ಜನರು ಉದ್ಯೋಗ ಅರಸಿ ಪಟ್ಟಣ ಸೇರಲು ಪ್ರಾರಂಭಿಸಿದ ನಂತರ ಹಳ್ಳಿಗಳು ವ್ರುದ್ಧಾಶ್ರಮಗಳಾಗಿ ಮಾರ್ಪಾಡು ಹೊಂದುತ್ತಿದೆ.ಇಗ ಓದಲಿ,ಓದದೆ ಇರಲಿ ಜನರು ಉದ್ಯೋಗಕ್ಕಾಗಿ ಪಟ್ಟಣ ಸೇರುತ್ತಿರುವುದನ್ನು ಕಾಣಬಹುದಾಗಿದೆ.ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಕೃಷಿ ಮಾಡುವವರಿಲ್ಲದೆ,ನಾವು ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗಬಹುದು.                                       ನಾವೂ ಕೂಡ ನಮ್ಮ ಮಕ್ಕಳು ಇಂಜಿನಿಯರ್,ಡಾಕ್ಟರ ಆಗಬೇಕು ಅಂತ ಬಯಸುತ್ತೆವೆಯೇ ಹೊರತು,ನನ್ನ ಮಗ ಒಬ್ಬ ಕೃಷಿಕ ನಾಗಲಿ ಅಂತ ಬಯಸುವುದಿಲ್ಲ.ಆದರೆ ವಿದ್ಯಾವಂತರು ಕೃಷಿಯಲ್ಲಿಯೇ ಏನಾದರೂ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಬಹುದು.ಹಾಗಂತ ಪಟ್ಟಣಗಳೆ ಬೇಡ,ಪಟ್ಟಣದಲ್ಲಿ ಉದ್ಯೋಗವನ್ನೇ ಮಾಡಬಾರದು ಅಂತ ಅಲ್ಲ.ಭಾರತ ಅಭಿವೃದ್ಧಿ ಹೊಂದಲು ಕೈಗಾರಿಕೆಗಳೂ ಅಷ್ಟೇ ಮುಖ್ಯ.ಆದರೆ ಎಲ್ಲರೂ ಕೈಗಾರಿಕೆಗಳಲ್ಲಿಯೇ ದುಡಿಯುವವರಾದರೆ ,ಕೃಷಿಯ ಗತಿ ಏನು?ಅತಿಯಾದರೆ ಅಮೃತವೂ ವಿಷವಾಗುತ್ತದೆ.           ಇತ್ತೀಚಿಗೆ ನಾವು ಯಾವುದೇ ಹಳ್ಳಿಗಳಲ್ಲಿ ಕಾಣಬಹುದಾದ ಬಹು ಮುಖ್ಯ ಅಂಶ ಎಂದರೆ ,ಹಳ್ಳಿಗಳು ವೃದ್ಧಾಶ್ರಮ ಗಳಾಗುತ್ತಿರುವುದು.ಯಾವುದೇ ಮನೆಯಲ್ಲಿ ಕೇಳಿದರೂ ,"ನನ್ನ ಮಕ್ಕಳು ಪಟ್ಟಣದಲ್ಲಿದ್ದಾರೆ,ನನ್ನ ಮಗವಿದೇಶದಲ್ಲಿರೋದು,ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಇಬ್ಬರೇ ಇರೋದು "ಅಂತಾರೆ.ಮೊದಲೆಲ್ಲ ಮಕ್ಕಳು, ಮೊಮ್ಮಕ್ಕಳ ಜೊತೆ ಹಾಯಾಗಿ ತಮ್ಮ ಮುಸ್ಸಂಜೆಯ ಜೀವನವನ್ನು ಸಾಗಿಸುತ್ತಿದ್ದವರು,ಇಂದು ಏಕಾಂಗಿಯಾಗಿ ತಮ್ಮ ಕೊನೆಗಾಲವನ್ನು ಕಳೆಯುವಂತಹ ಪರಿಸ್ತಿತಿ ಬಂದೊದಗಿದೆ.ತಮ್ಮ ಮಕ್ಕಳು ,ತಮ್ಮ ಕೊನೆಗಾಲದಲ್ಲಿ ತಮಗೆ ಆಸರೆಯಾಗಿರುತ್ತಾರೆ ಎಂಬ ಕಿಂಚಿತ್ ಆಸೆಯನ್ನು ತಂದೆ ತಾಯಿ ಇಟ್ಟುಕೊಳ್ಳುವಂತಿಲ್ಲ.ಎಷ್ಟೋ ಮಕ್ಕಳಿಗೆ ತಮ್ಮ ತಂದೆ ತಾಯಿಯ ಅಂತ್ಯಸಂಸ್ಕಾರಕ್ಕೂ ಬರಲು ಆಗುವುದಿಲ್ಲ.ಏಕೆಂದರೆ ,ಅವರು ವಿದೇಶದಲ್ಲಿರುತ್ತಾರಲ್ಲ.!!!!!!!!!!                 ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ,ತಂದೆ ತಾಯಿ "ತನ್ನ ಅಳಿಯನಾಗಿ ಬರುವವನು ವಿದೇಶದಲ್ಲೇ ಇರಬೇಕು,ಅಥವಾ ಪಟ್ಟಣದಲ್ಲಿಯಾದರೂ ಇರಬೇಕು .ಹಳ್ಳಿಯಲ್ಲಿದ್ದವನಿಗೆ ತಮ್ಮ ಮಗಳನ್ನು ಕೊಡುವುದಿಲ್ಲ "ಎನ್ನುತ್ತಾರೆ.ಆದ್ದರಿಂದಲೇ ,ತಮ್ಮ ಹೊಟ್ಟೆ ಬಟ್ಟೆ ಕಟ್ಟಿಯಾದರೂ ಮಕ್ಕಳನ್ನು ಚೆನ್ನಾಗಿ ಓದಿಸಿ ಪಟ್ಟಣ ಸೇರಿಸುತ್ತಾರೆ.ಒಮ್ಮೆ ಪಟ್ಟಣ ಸೇರಿದ ಮಗ/ಮಗಳು ಮತ್ತೆ ಹಳ್ಳಿಗೆ ಬರಲು ಒಪ್ಪುವುದು ಅಪರೂಪ."ಅಪ್ಪ,ಅಮ್ಮ ನೀವೇ ನಮ್ಮ ಜೊತೆ ಬಂದುಬಿಡಿ."ಎನ್ನುತ್ತಾರೆ.ಆದರೆ ತಮ್ಮ ಹಳ್ಳಿ ,ತಮ್ಮ ಹೊಲಗದ್ದೆಗಳ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಅಪ್ಪ ಅಮ್ಮ ಪಟ್ಟಣದ ಯಾಂತ್ರಿಕ ಬದುಕಿಗೆ ಹೊಂದಿಕೊಳ್ಳಲು  ಸಾಧ್ಯವಾಗದೆ "ಇಲ್ಲಪ್ಪ ನಾವು ಇಲ್ಲಿಯೇ ಇರುತ್ತೇವೆ.ಹೇಗೋ ಜೀವನ ಸಾಗುತ್ತದೆ.ನೀವು ಚೆನ್ನಾಗಿರಿ "ಎಂದು ಮಕ್ಕಳನ್ನು ಹಾರೈಸಿ ಕಳುಹಿಸುತ್ತಾರೆ.ಹೀಗೆ ಹಳ್ಳಿಗಳು ಇಂದು ವೃದ್ಧಾಶ್ರಮ ಗಳಾಗಿ ಮಾರ್ಪಾಡಾಗುತ್ತಿದೆ

4 ಕಾಮೆಂಟ್‌ಗಳು:

Ashok.V.Shetty, Kodlady ಹೇಳಿದರು...

ಹೌದು, ಹಳ್ಳಿಗಳಲ್ಲಿ ಯಾರೂ ಇಲ್ಲ, ಕೃಷಿ ಯನ್ನು ಮಾಡೋರು ಕಡಿಮೆ ಆಗಿದ್ದಾರೆ, ಮಾಡಬೇಕು ಅನ್ನೋರಿಗೂ ಕೂಲಿಯಾಳುಗಳು ಸಿಗ್ತಾ ಇಲ್ಲ, ವಿದ್ಯಾವಂತ ಯುವಕರಿಗೆ ತೃಪ್ತಿಯಾಗುವಂತ ಉದ್ಯೋಗ ಹಳ್ಳಿಗಳಲ್ಲ್ಲಿ ಸಿಗದೇ ಇರೋ ಕಾರಣದಿಂದ ಅವರು ಪಟ್ಟಣಗಳಿಗೆ ಉದ್ಯೋಗ ಹುಡುಕುತ್ತಾ ಹೋಗುತಿದ್ದಾರೆ. ವಿದ್ಯಾವಂತ ರಿಗೆ ಕೃಷಿ ಕೆಲಸ ಮಾಡಲು ಮನಸಾಗೋಲ್ಲ.....ಏನ್ ಮಾಡೋದು ಹೇಳಿ.....ಇದಕ್ಕೆ ಪರಿಹಾರ ಕಂದು ಕೊಳ್ಳುವುದು ಕಷ್ಟಾನೆ.....

ಚಿಂತನೆಗೆ ಹಚ್ಚಿಸುವ ಲೇಖನ....ಹೀಗೆ ಬರೀತಾ ಇರಿ....

ushodaya ಹೇಳಿದರು...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್.

ಅನಾಮಧೇಯ ಹೇಳಿದರು...

ಕಣ್ಣು ತೆರೆಸುವ ಲೇಖನ ... ನಿಮ್ಮ ಮಾತು ಅಕ್ಷರಶಃ ನಿಜ
http://nenapinasanchi.wordpress.com

ushodaya ಹೇಳಿದರು...

thank you sir.