"ವಸುಧ".ಈ ವಸುಧೆಗಿ೦ತ ಸು೦ದರವಾದ ಲೋಕವನ್ನು ಕಾಣುವುದು ಅಸಾಧ್ಯ.ಈ ಪುಟ್ಟ ಗ್ರಹದಲ್ಲಿ,ಅದೆಶ್ಟೊ೦ದು ವೈಚಿತ್ರ್ಯಗಳು.ಇ೦ತ ವಸುಧೆಯಲ್ಲಿ ಹುಟ್ಟಿದ ನಾವೇ ಧನ್ಯರು.
ಗುರುವಾರ, ಆಗಸ್ಟ್ 16, 2012
ಗುರುವಾರ, ಆಗಸ್ಟ್ 9, 2012
ನಮ್ಮ ದೈನ೦ದಿನ ಬದುಕಿನಿ೦ದ ಮರೆಯಾಗುತ್ತಿರುವ ಪದ ”ನಿಶ್ಯಬ್ಧ”.
ಇತ್ತೀಚಿಗೆ ನಾವೆಲ್ಲಾ ಆಧುನೀಕತೆಗೆ ಒಗ್ಗಿಕೊ೦ಡು ಒಂದು ಪದವನ್ನೇ ಮರೆತು ಹೋಗಿದ್ದೇವೆ .......ಅದು ಯಾವುದು ????? ಅದೇ ''ನಿಶ್ಯಬ್ಧ'' .ಇಂದು ನಾವು ಎಲ್ಲಿ ನೋಡಿದರೂ,ಗಲಾಟೆ ,ಜೋರುಜೋರು ಧ್ವನಿ ,ಮೈಕಾಸುರನ ಹಾವಳಿ ,ವಾಹನಗಳ ಆರ್ಭಟ ,ಕಾರ್ಖಾನೆಗಳ ಕಿರುಚುವಿಕೆ...............ಹೇಳುತ್ತಾ ಹೋದರೆ,ಧಾರಾವಾಹಿಗಳ ರೀತಿ ಮುಗಿಯದ ಕತೆ .ಹೋಗಲಿ ಬಿಡಿ,ಮನೆಯಲ್ಲಾದರೂ ಒಂದು ನಿಮಿಷ ನೆಮ್ಮದಿಯಿಂದ ಇರೋಣ ಎಂದುಕೊಂಡರೆ ,ಅಬ್ಬಬ್ಬಾ .....ಆ ಮಿಕ್ಸಿಯ ಗರ್ ಎನ್ನುವ ಸಂಗೀತ ,ವಾಶಿಂಗ್ ಮಶಿನ್ನಿನ ಹೂಂಕಾರ,ಟಿ.ವಿ.ನಾನೇನು ಕಡಿಮೆ ಅಂತ ತನ್ನದೇ ಆದ ವಿವಿಧ ರೀತಿಯ ಸ್ವರಗಳನ್ನು ,ವಿವಿಧ ರೀತಿಯ ರಾಗಗಳಿಂದ ಮನೆಯೇ ಕಂಪಿಸುವಂತೆ ಹಾಡುತ್ತಿರುತ್ತದೆ .ಅಷ್ಟೇ ಅಲ್ಲದೆ ,ಫ್ಯಾನ್ ಜೋರಾಗಿ ಗಲಾಟೆ ಮಾಡದೇ ಇದ್ದರೂ ,ನಿಶ್ಯಬ್ಧ ಹಾಳು ಮಾಡಲು ಬೇಕಾಗುವಷ್ಟು ಶಬ್ಧವನ್ನಂತೂ ಹೊರಡಿಸುತ್ತದೆ ........ಇದೆಲ್ಲ ಆಯ್ತು ,ಇನ್ನು ಇರೋದೇ ಮಹಾನ್ ಗಲಾಟೆಕಾರ ಹಾಗೂ ಎಲ್ಲೆಂದರಲ್ಲಿ ಯಾವಾಗ ಅಂದ್ರೆ ಅವಾಗಾ,ವಿವಿಧ ರೀತಿಯ ರಿಂಗಾಯನ ದಿಂದ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿರುವ ಜಂಗಮ ಗಂಟೆಗಳು .........ಅಬ್ಬಬ್ಬಾ ಅದೇನ್ ಮ್ಯುಸಿಕ್ ,ಅದೇನ್ ಹಾಡೋ !!!!!!!!ಅದರ ಸುಮಧುರ ಸಂಗೀತ ಅನುಭವಿಸಿದವರಿಗೆ ಗೊತ್ತು .......ಎಲ್ಲ ಮುಗಿತು,ಅನ್ನೋ ಅಷ್ಟರಲ್ಲಿ ಕಾಲಿಂಗ್ ಬೆಲ್ .......ನಾನು ಅವಾಗ್ ಅವಾಗ ಅವಾಜ್ ಹಾಕ್ತಾ ಇರ್ತೀನಿ ಅನ್ನುತ್ತೆ ...ನೋಡಿದ್ರಾ ನಾವು ಪ್ರಶಾಂತತೆಯನ್ನು ಎಷ್ಟು ರೀತಿಯಲ್ಲಿ ಕಳೆದು ಕೊಳ್ಳುತ್ತಿದ್ದೇವೆ ಎಂದು .....ಶಬ್ಧ... ಶಬ್ಧ್ಸ......ಶಬ್ಧಮಯವೀ ಬದುಕು....ಮೊದಲು ಹೀಗಿರಲಿಲ್ಲ....ಮನೆಗಳಲ್ಲಿ ಒ೦ದು ರೀತಿಯ ಶಾ೦ತತೆಯ ವಾತಾವರಣ ಇರುತ್ತಿತ್ತು.ಆದರೆ ಇ೦ದಿನ ದಿನಗಳಲ್ಲಿ ಮೀನಿನ ಹೆಜ್ಜೆಯನ್ನಾದರೂ ಹುಡುಕಬಹುದು , ಇ೦ತಹ ಶಾ೦ತತೆಯನ್ನು ಕಾಣುವುದು ಕಷ್ಟವೇ ಸರಿ !!!!ನೂರಾರು ಅನಗತ್ಯ ಶಬ್ಧಗಳನ್ನು ಚಟಗಳಂತೆ ಹಚ್ಚಿಕೊಂಡ ನಮಗೆ ಎಂದೋ ಒಮ್ಮೆ ಇಂತಹ ಏಕಾಂತ ಸಿಕ್ಕಿದಾಗ ಅದು ಬಹುಬೇಗ ಬೋರ್ ಎನ್ನಿಸಿಬಿಡುತ್ತದೆ.ಇವತ್ತು ನಾವು ಶಾಂತವಾಗಿರುವ ''ಮಾನಸ ಸರೋವರ''ಕ್ಕೆ ಅನಗತ್ಯವಾದ ಸದ್ದು ಗದ್ದಲಗಳ ಕಲ್ಲೆಸೆದು ,ನಮ್ಮ ಬದುಕಿನ ಶಾಂತತೆಯನ್ನು ಕಳೆದು ಕೊಂಡಿದ್ದೆವೇನೋ ...ಎಂದು ಭಾಸವಾಗುತ್ತಿದೆ ......
ಮಂಗಳವಾರ, ಜುಲೈ 31, 2012
ಕು೦ದಾದ್ರಿ ಕೈಬೀಸಿ ಕರೆಯುತಿದೆ...........
ಮಂಜು ಮುಸುಕಿದ ಬೆಟ್ಟಗಳ ಸಾಲುಗಳ ಮಧ್ಯೆ ,ಕಡಿದಾದ ತಿರುವುಗಳಲ್ಲಿ,ನಾವು ಚಲಿಸುತ್ತಿದ್ದೆವು.ಇಲ್ಲಿ ವಾಹನ ಚಾಲಕರು ,ವಾಹನ ಚಲಾಯಿಸುವಾಗ ಸ್ವಲ್ಪಗಮನ ತಪ್ಪಿದರೂ ಸಾವಿರಾರು ಅಡಿಗಳ ಕೆಳಕ್ಕೆ ಬೀಳುವುದ0ತೂ ಸತ್ಯ.............ಆಬ್ಬಬ್ಬಾ!!!! ಆ ಹಾದಿಯಲ್ಲಿ ಪ್ರಯಾಣ ಮಾಡುವುದೇ ಒಂದು ಹೊಸ ಅನುಭವ.
ಇದು ಎಲ್ಲಪ್ಪಾ .....ಎಂದುಕೊಳ್ಳುತ್ತಿದ್ದೀರಾ?ಅದೇ ಕುಂದಾದ್ರಿ ಬೆಟ್ಟ.ಕುಂದಾದ್ರಿ ಬೆಟ್ಟವು ಶಿವಮೊಗ್ಗ ಜಿಲ್ಲೆ ,ತೀರ್ಥಹಳ್ಳಿ ತಾಲ್ಲೂಕಿನಲ್ಲಿದೆ.ತೀರ್ಥಹಳ್ಳಿಯಿಂದ ಆಗು0ಬೆ ಹೋಗುವಾಗ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು 9 ಕಿ.ಮೀ . ದೂರದಲ್ಲಿ ಕುಂದಾದ್ರಿ ಬೆಟ್ಟವಿದೆ.
ಬೆಟ್ಟ ತಲುಪಲು ಡಾಂಬರು ರಸ್ತೆ,ಹಾಗೂ ಕಾಲುದಾರಿಯೂ ಇದೆ.ಕುಂದಾದ್ರಿ ಬೆಟ್ಟ ಜೈನರ ಪವಿತ್ರ ಯಾತ್ರಾಸ್ಥಳ.ಬೆಟ್ಟದ ಮೇಲೆ ಪಾರ್ಶ್ವನಾಥ ಚೈತ್ಯಾಲಯವಿದೆ.ಚಾರಣಿಗರಿಗೆ ಚಾರಣ ಮಾಡಲು ಹೇಳಿ ಮಾಡಿಸಿದಂತಿದೆ ಈ ಕುಂದಾದ್ರಿ ಬೆಟ್ಟ.
ಬೆಟ್ಟದ ಮೇಲಿಂದ ಕಾಣುವ ಪ್ರಕೃತಿ ಸೌಂದರ್ಯ ಕಣ್ಣಿಗೆ ಹಬ್ಬವಾಗುತ್ತದೆ.ಎಲ್ಲಿ ನೋಡಿದರಲ್ಲಿ ದಟ್ಟ ಕಾಡು ,ತೋಟಗಳು,ಹೊಲಗದ್ದೆಗಳು ಆ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲಾ......
ಈ ಬೆಟ್ಟದ ತುಟ್ಟತುದಿಯಲ್ಲಿ,ಒಂದು ಸುಂದರವಾದ ಪುಷ್ಕರಿಣಿಯೂ ನಮ್ಮ ಗಮನವನ್ನು ತನ್ನಕಡೆ ಸೆಳೆಯುತ್ತದೆ.ಇಲ್ಲಿ ಯಾವಾಗಲೂ ನೀರು ಇರುತ್ತದೆ ,ಎಂದು ಹೇಳುತ್ತಾರೆ.[ಆದರೇ ,ಪ್ರವಾಸಿಗರು ಪ್ರಕೃತಿಯು ನೀಡಿದ ಸ್ವಚ್ಛ ನೀರಿನ ಈ ಪುಷ್ಕರಿಣಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು,ಪ್ಲಾಸ್ಟಿಕ್ ಕವರ್ ,ಹಾಗೂ ಇನ್ನೂ ಅನೇಕ ಪ್ರಕೃತಿಯಲ್ಲಿ ಲೀನವಾಗದೇ ಇರುವಂತಹ ,ವಸ್ತುಗಳನ್ನು ಎಲ್ಲೆಂದರಲ್ಲಿ ಬೀಸಾಡಿ ಪರಿಸರ ಮಾಲಿನ್ಯಕ್ಕೆ ಕಾರಣರಾಗಿದ್ದಾರೆ.ಮನುಷ್ಯನ ಈ ಕೆಟ್ಟ ಸ್ವಭಾವಕ್ಕೆ ಪ್ರಕೃತಿ ತಿರುಗೇಟು ನೀಡುವ ಕಾಲ ದೂರದಲ್ಲಿಲ್ಲಾ........]
ಈ ಕುಂದಾದ್ರಿ ಬೆಟ್ಟದಲ್ಲಿ ಕುಂದಕುಂದ ಸ್ವಾಮಿಗಳು ತಪಸ್ಸು ಮಾಡಿದರೆಂಬ ಪ್ರತೀತಿ ಇದೆ.ಈ ಹಿನ್ನಲೆಯಲ್ಲಿ ''ಕುಂದಾದ್ರಿ''ಎಂಬ ಹೆಸರು ಬಂತು ಎನ್ನಲಾಗುತ್ತದೆ.
ಕನ್ನಡದಲ್ಲಿ ಕುಂದಾದ್ರಿ ಎಂಬ ಪದಕ್ಕೆ ''ಎತ್ತರವಾದ ಗೋಡೆ''ಎಂಬ ಅರ್ಥವೂ ಇದೆ .ಇದು ಕುಂದದ ರೀತಿ ಇರುವುದರಿಂದ ಇದಕ್ಕೆ ''ಕುಂದಾದ್ರಿ''ಎಂದು ಜನಬಳಕೆಯಲ್ಲಿ ಹೆಸರು ಬಂದಿರಬಹುದೆಂದು ಹೇಳಲಾಗುತ್ತದೆ.
ಕುಂದಾದ್ರಿಯ ತುದಿಯಲ್ಲಿ ಒಂದು ದೇವಾಲಯ ಮತ್ತು ನೀರಿನ ಅನುಕೂಲವಿದ್ದರೂ ಪ್ರವಾಸಿಗರಿಗೆ ತಂಗಲು ಸರಿಯಾದ ವ್ಯವಸ್ಥೆ ಇಲ್ಲ..ಚಾರಣಿಗರು ಕ್ಯಾಂಪ್ ಮಾಡಬಹುದು.ಪ್ರವಾಸಿಗರು ಸಮೀಪದ ತೀರ್ಥಹಳ್ಳಿ ಅಥವಾ ಆಗುಂಬೆಯಲ್ಲಿ ತಂಗಬಹುದು.
ಮತ್ತೊಂದು ವಿಷಯ ,ಕುಂದಾದ್ರಿ ಬೆಟ್ಟಕ್ಕೆ ಭೇಟಿ ನೀಡುವವರು ,ಊಟ ಮತ್ತು ನೀರಿನ ವ್ಯವಸ್ಥೆ ಮಾಡಿಕೊಂಡು ಬಂದರೆ ಉತ್ತಮ.ಹಾಗಾದರೆ,ಈ ವೀಕೆಂಡ್ನಲ್ಲಿ ನಿಮ್ಮ ಪಯಣ ........ಕುಂದಾದ್ರಿ ಬೆಟ್ಟಕ್ಕೆ......
ಸೋಮವಾರ, ಜುಲೈ 23, 2012
ಅದ್ಭುತ ಎಲೆ ಕೀಟಗಳು.
''ಅಮ್ಮಾ.......ಅಮ್ಮಾ .....ಬಾಇಲ್ಲಿ ,ನಿನಗೇನೋ ತೋರ್ಸ್ತೀನ್ ಬೇಗ ಬಾ ಅಮ್ಮಾ.........''.ನಾನು ಅಡುಗೆ ಮನೆಯಲ್ಲಿದ್ದವಳು ಒಂದೇ ಉಸುರಿಗೆ ಓಡಿ ಬಂದು,''ಏನೋ ಅದು ನಿಂದು ಗಲಾಟೆ ,ಏನಿದೇ ....ಬೇಗ ತೋರಿಸು,ನನಗೆ ತುಂಬಾ ಕೆಲಸ ಇದೆ.''ಎಂದೆ .''ಅಮ್ಮಾ ಇಲ್ನೋಡು ಎಲೆಗೆ ಜೀವ ಬಂದು ಓಡಾಡ್ತಾ ಇದೆ!!!!!!!!!!!!!!!!!!''.ಹೌದು ಅವನು ನನಗೆ ತೋರಿಸಿದ್ದು ,ಎಲೆಯನ್ನೇ ಹೋಲುವ ಎಲೆಕೀಟವನ್ನು.ನಂತರ ಅವನಿಗೆ ಅದು ಎಲೆಅಲ್ಲಾ ,ಅದು ಒಂದು ಜಾತಿಯ ಕೀಟಎಂದು ಹೇಳಿದೆ.
ಕೆಲವು ಕೀಟಗಳು ಕಡ್ಡಿಗಳಂತೆ ಕಾಣಿಸುತ್ತವೆ.ಕೆಲವು ಕೀಟಗಳು ಗಿಡದ ಕಾಂಡಗಳು ಮತ್ತು ಮುಳ್ಳುಗಳನ್ನು ಅನುಕರಿಸುತ್ತವೆ.ಆದರೆ ಎಲೆಗಳನ್ನು ನಕಲು ಹೊಡೆಯುವುದರಲ್ಲಿ ಎಲೆಕೀಟಗಳನ್ನು ಮೀರಿಸಿದ ಜೀವಿಯೇ ಇಲ್ಲ ಎನ್ನಬಹುದು.
ಇವು ಎಲೆಗಳ ಆಕೃತಿ ಮತ್ತು ಬಣ್ಣವನ್ನಷ್ಟೇ ಅಲ್ಲದೇ ಎಲೆಗಳ ನಡುವೆ ಇರುವ ನರಗಳನ್ನು ,ನಡುವೆ ಹುಳುಗಳು ಕಚ್ಚ್ಹಿದ ಗಾಯದ ಗುರುತುಗಳನ್ನೂ ಕೂಡ ಅಕ್ಷರಶಃ ನಕಲು ಹೊಡೆಯುತ್ತದೆ.
ಇವು ಹಸಿರು ಎಲೆಗಳಾಗಿ ಗಿಡಕ್ಕೆ ಜೋತು ಬೀಳುತ್ತವೆ,ಒಣ ಎಲೆಗಳಂತೆ ಗಾಳಿಯಲ್ಲಿ ತೇಲುತ್ತವೆ, ಮುಳ್ಳಿನ ಎಲೆಗಳಂತೆ ಗಿಡಗಳ ಮೇಲೆ ಕುಳಿತುಕೊಳ್ಳುತ್ತವೆ.ಇವು ನೆಲದ ಮೇಲೆ ನಡೆದಾಡುವಾಗಲೂ ಗಾಳಿಗೆ ತೂಗುವ ಎಲೆಗಳಂತೆ ಅತ್ತಿಂದಿತ್ತ ತೂಗುತ್ತ ನಡೆಯುತ್ತದೆ.
ಯಾವ ಪ್ರಾಣಿ ಪಕ್ಷಿಗಳ ಕಣ್ಣಿಗೂ ಗೋಚರವಾಗದಷ್ಟು ನೈಜವಾಗಿರುತ್ತವೆ ಅವುಗಳ ಅಣಕು ಕಲೆ!!!!!!!!!!!!!!!!!!!!.
ಗುರುವಾರ, ಜುಲೈ 19, 2012
ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳು.
![]() |
ಕುಂಟಾಬಿಲ್ಲೆ |
ಏ ಕಮಲಾ,ಬಾರೆ ಕುಂಟಾಬಿಲ್ಲೆ ಆಡನಾ.......ರೂಪಾ ಚೌಕಾಕಾರದ ಮನೆ ಹಾಕೇ ,ಅಷ್ಟರಲ್ಲಿ ನೀಲ,ದೇವಿಕ,ಲಲಿತ ಎಲ್ಲರನ್ನೂ ಕರ್ಕೊಂಡ್ ಬರ್ತೀನಿ .
![]() |
ಸೆಟ್ ಆಟ |
ರವಿ,ಹೋಗೋ ಆಕಡೆ ..ಇದು ಹೆಣ್ಮಕ್ಳು ಆಡೋ ಆಟ ..........ನೀನು ಬುಗುರಿ ಆಡ್ಕೋ ಹೋಗೋ....ಬೇಗ ಬೇಗ ಒಂದೇ ಬಣ್ಣದ ಬಳೆ ಚೂರುಗಳನ್ನ ಜೋಡಿಸೋಣ ಬನ್ರೆ........
![]() |
ಬುಗುರಿ ಆಟ |
ಏ ಹೋಗ್ರೆ ನಿಮ್ ಜೊತೆ ಯಾರ್ ಆಡಲಿಕ್ಕೆ ಬರ್ತಾರೆ,ನೋಡು ನನ್ನ ಬುಗುರಿ ಹೇಗ್ ತಿರಗ್ತಾ ಇದೆ.ನಿಮ್ಗ್ ಬರತ್ತಾ................ಬುಗುರಿ ತಿರಸಲಿಕ್ಕೆ.
![]() |
ಗೋಲಿ ಆಟ. |
ಏ ರವಿಯಣ್ಣ ಬಾರೋ........... ಗೋಲಿ ಆಡೋಣಾ ...........ಪ್ಲೀಸ್ .........
![]() |
ಎತ್ಗಲ್ ಆಟ. |
ಒಬ್ಳೇ ಎತ್ಗಲ್ ಆಡ್ತಾ ಇದೀನಿ .............ಯಾರಾದ್ರು ಜೊತೆಗಿದ್ದಿದ್ರೆ ಎಷ್ಟ್ ಚೆನ್ನಾಗ್ ಇರ್ತಿತ್ತು.ಕಮಲ,ನೀಲಾ ಎಲ್ಲಾ ಎಲ್ಹೊದ್ರು????????????
![]() |
ಕಣ್ಣಾಮುಚ್ಚಾಲೆ |
ಕಣ್ಣಾಮುಚ್ಚೆ ಕಾಡೆಗೂಡೆ .....ಉದ್ದಿನ ಮೂಟೆ ಉರುಳೇ ಹೋಯ್ತು ...........................................ಕೂಕಾ ......ಕಣ್ ಬಿಟ್ಟೆ.........
![]() |
ಮರಕೋತಿ ಆಟ. |
ಏ ಬನ್ರೋ .......ಮರಕೋತಿ ಆಟ ಆಡನ ಅಂತ ಮರ ಹತ್ತಿಸಿ ಹ್ಹೊದೋರು ಎಲ್ಹೊದ್ರೋ ............ನನಗೆ ಭಯ ಆಗ್ತಿದೆ .......ಪ್ಲೀಸ್ ಕೆಳಗಿಳ್ ಸ್ರೋ .............
![]() |
ಚನ್ನೆಮಣೆ |
ಬಾರೆ ಶ್ರೀಮತಿ ,ಮಕ್ಕಳು ಹೇಗೂ ಹೊರಗಡೆ ಆಡ್ತಾ ಇದಾರೆ.ನಂದೂ ಕೆಲಸ ಮುಗಿತು ,ಇಬ್ಬರೂ ಸ್ವಲ್ಪ ಹೊತ್ತು ಚನ್ನೆಮಣೆ ಆಡಣಾ ..........ಹೌದೆ ವತ್ಸಲಕ್ಕ ......ನಂದೂ ಕೆಲಸ ಎಲ್ಲಾ ಮುಗಿತು ...........ಸ್ವಲ್ಪ ಹೊತ್ತು ಆಡಣ ............ಹಾಗಾದ್ರೆ ಶುರುಮಾಡು ಮತ್ತೆ......
ಈಗಿನ ಗಣಕ ಯಂತ್ರ ,ದೂರದರ್ಶನದ ಅಬ್ಬರ,ಮಕ್ಕಳ ಮಿತಿಮೀರಿದ ಹೋಂ ವರ್ಕ್ ಗಳ ನಡುವೆ ಈ ಕ್ರೀಡೆಗಳೆಲ್ಲಾ ಮರೆಯಾಗುತ್ತಿರುವುದು ತುಂಬಾ ಬೇಸರದ ಸಂಗತಿಯೇ ಸರಿ.ಹೀಗೆ ಹಳ್ಳಿಯಲ್ಲಿಯೇ ದೊರೆಯುವ ಯಾವುದೇ ರೀತಿಯ ವೆಚ್ಛ ಇಲ್ಲದ,ಬುದ್ದಿಗೆ ಕೆಲಸ ಕೊಡುವ,ದೇಹಕ್ಕೆ ವ್ಯಾಯಾಮ ಉಂಟಾಗುವ,ಮನಸ್ಸಿಗೆ ಆನಂದ ಕೊಡುವ,ಭೇದ ಭಾವ ವಿಲ್ಲದೇ ಎಲ್ಲಾ ಮಕ್ಕಳೂ ಹೊಂದಿಕೊಂಡು ಒಟ್ಟಿಗೇ ಆಡುತ್ತಿದ್ದ ಆಕಾಲವೆಲ್ಲಿ ..................ಮನೆಯಲ್ಲಿಯೇ ಟಿ .ವಿ ,ಗಣಕಯಂತ್ರಗಳ ಮುಂದೆ ಕುಳಿತು ,ಗಂಟೆಗಟ್ಟಲೇ ಸಮಯವನ್ನು ಕಳೆಯುವ ಇಂದಿನ ಮಕ್ಕಳ ಮುಂದಿನ ಭವಿಷ್ಯವನ್ನು ನೀವೇ ಒಮ್ಮೆ ಯೋಚಿಸಿ ನೋಡಿ...........................
ಮಂಗಳವಾರ, ಜುಲೈ 17, 2012
HOOGALU.
ಹೂ ಬಿಟ್ಟ ಗಿಡ ಯಾರನ್ನು ತಾನೇ ಆಕರ್ಷಿಸುವುದಿಲ್ಲಾ?ದೇವರು ಒಬ್ಬ ಮಹಾನ್ ಕಲಾವಿದ ಎನ್ನುವುದಕ್ಕೆ ಬಗೆ ಬಗೆಯ ಈ ಹೂಗಳೇ ಸಾಕ್ಷಿ.ಇಡೀ ಲೋಕವನ್ನು ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿದ್ದಾನೆ.
ಮಾನವ ಎಷ್ಟೇ ದೊಡ್ಡ ಕಲಾಕಾರ ಎನಿಸಿದರೂ, ದೇವರು ಸೃಷ್ಟಿಸಲಾಗದ ಸುಗಂಧವನ್ನು ಅದರಲ್ಲಿ ಬೆರೆಸಿ,ಎಂಥವರೂ ಮನ ಸೋಲುವಂತೆ ಮಾಡಿದ್ದಾನೆ.ಇಂದು ಹೂಗಳಿಗೇನೂ ಕಡಿಮೆ ಇಲ್ಲ.ನಾನಾ ಬಣ್ಣದ ನಾನಾ ವಿಧದ ಹೂಗಳು ದೊರೆಯುತ್ತವೆ.ಆದರೆ ಮೊದಲಿನ ಹಾಗೆ ಇಂದು ಹೂಗಳನ್ನು ಮುಡಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ ಅಷ್ಟೇ.
ಆದರೆ ಇಂದು ಹೂಗಳು ವ್ಯಾಪಾರ ವಸ್ತುವಾಗಿದೆ.ದೊಡ್ಡ ಉದ್ಯಮವಾಗಿ ಬೆಳೆದಿದೆ[ಪುಷ್ಪೋದ್ಯಮ].ಕೆಲವೊಂದು ಹೂಗಳು ಅ0ದಕ್ಕಷ್ಟೇ ಇದ್ದು ಕಣ್ಣಿಗೆ ಮನಸ್ಸಿಗೆ ಆಹ್ಲಾದವನ್ನು0ಟುಮಾಡುತ್ತದೆ.
ಆದರೆ ನಮ್ಮಲ್ಲಿ ನಿಷ್ಪ್ರಯೋಜಕರೆನಿಸಿದ ಅದೆಷ್ಟೋ ಮಂದಿ ಇತರರಿಗೆ ತೊಂದರೆ ಕೊಡುವುದರ -ಲ್ಲಿಯಾದರೂ ಸಂತೋಷ ಹೊಂದುತ್ತಾರೆ.ಆದರೆ ಹೂಗಳು ಹಾಗಲ್ಲ. ಕೆಲವೊಂದು ಹೂಗಳು ಯಾವುದೇ ಪ್ರಯೋಜನಕ್ಕೆ ಬಾರದೇ ಇದ್ದರೂ ,ತೊಂದರೆಯನ್ನ0ತೂ ನೀಡುವುದಿಲ್ಲ.
ತಾವುಗಳು ಅಲ್ಪಾಯುಷಿಗಳು ಎಂಬ ಅರಿವು ಅವಕ್ಕೆ ಇದ್ದಂತಿದೆ.ಹಾಗಾಗಿಯೇ ಇರುವಷ್ಟು ದಿನ ಇತರರ ಸಂತೋಷಕ್ಕಾಗಿ ಎಂಬಂತೆ ಅವು ಉಳಿದು ಅಳಿಯುತ್ತದೆ.ಧೀರ್ಘಾಯುಷಿ ಎಂದು ಬೀಗುವ ಮನುಷ್ಯ ಈ ಪ್ರಪಂಚದಲ್ಲಿ ಏನೆಲ್ಲಾ ಮಾಡಲು ಸಿದ್ಧನಾಗಿರುತ್ತಾನೆ,ಆದರೇ ಆಗ ಹುಟ್ಟಿ,ಆಗ ಸಾಯುವ ಅದೆಷ್ಟೋ ಹೂಗಳು ಅದರ ಅರಿವೇ ಇಲ್ಲದೆ ಅದೆಷ್ಟು ಮನಗಳನ್ನು ಮುದಗೊಳಿಸುತ್ತದೆ.
ಭಾನುವಾರ, ಜುಲೈ 15, 2012
MAGU KALISIDA PAATA.
''ನಿಮಗೆ ಗೊಂಬೆಗಳು ಅಂದ್ರೆ ಇಷ್ಟಾನ ? ''ಪುಟಾಣಿ ಹುಡುಗಿಯೊಂದು ಮನೆಗೆ ಬಂದಿದ್ದ ಅತಿಥಿಯನ್ನು ಕೇಳಿದಳು .''ಹೌದು ತುಂಬಾ ಇಷ್ಟ .''ಅತಿಥಿ ಹೇಳಿದರು .ಕೂಡಲೇ ಆ ಪುಟಾಣಿ ತನ್ನ ಕೋಣೆಗೆ ಓಡಿಹೋಗಿ, ತನ್ನ ಗೊಂಬೆಗಳ ರಾಶಿಯನ್ನೇ ತಂದು ಅತಿಥಿಗಳ ಎದುರಿಗೆ ಇಟ್ಟಳು.''ಈ ಗೊಂಬೆಗಳಲ್ಲಿ ನಿನಗೆ ತುಂಬಾ ಪ್ರಿಯವಾದ ಗೊಂಬೆ ಯಾವುದು?''ಎಂದು ಅತಿಥಿ ಪುಟಾಣಿಯನ್ನು ಕೇಳಿದರು.ಪುಟಾಣಿ ,ಮೂಗು ಮುರಿದಿದ್ದ ,ಒಂದು ಕಾಲು ಒಂದು ಕೈ ಮುರಿದಿದ್ದ ಬೊಂಬೆಯೊಂದನ್ನು ಆ ರಾಶಿಯಿಂದ ಹೊರಕ್ಕೆ ತೆಗೆದು ಅತಿಥಿಗೆ ತೋರಿಸುತ್ತಾ ,''ಇದು'' ಎಂದಳು.ಆ ಅತಿಥಿ ಆಶ್ಚರ್ಯದಿಂದ ''ಏಕೆ''? ಎಂದು ಕೇಳಿದ.''ಏಕೆಂದರೆ ಇದನ್ನು ನಾನು ಪ್ರೀತಿಸದಿದ್ದರೆ ಇನ್ಯಾರು ಪ್ರಿತಿಸುತ್ತಾರೆ?''ಎಂದು ಅಭಿಮಾನದಿಂದ ಹೇಳಿದಳು.ಅತಿಥಿಗೆ ಆ ಪುಟ್ಟ ಮಗು ಅತಿದೊಡ್ಡ ಪಾಠ ಕಲಿಸಿತ್ತು .ಪ್ರೀತಿ ಎಲ್ಲರಿಗೂ ಬೇಕಾದರೂ ದುಃಖಿಗಳಿಗೆ
ಅಸಹಾಯಕರಿಗೆ,ರೋಗಿಗಳಿಗೆ,ವಿಕಲಾಂಗರಿಗೆ ಅದರ ಅವಶ್ಯಕತೆ ಇತರರಿಗಿಂತ ಹೆಚ್ಚಾಗಿರುತ್ತದೆ.ನಿಸ್ವಾರ್ಥ ಪ್ರೀತಿಯಲ್ಲಿ ಕೇವಲ ಅದನ್ನು ಕೊಡುವ ಭಾವನೆ ಮಾತ್ರ ಇರುತ್ತದೆ,ಹಿಂದಕ್ಕೆ ಪಡೆಯುವ ಆಕಾಂಕ್ಷೆ ಇರುವುದಿಲ್ಲ.ಇಲ್ಲಿ ಈ ಪುಟಾಣಿ ಎಲ್ಲಾ ಗೊಂಬೆಗಳಲ್ಲಿ ವಿಕಲಾಂಗವಾದ ,ಬೇರೆ ಯಾರೂ ಇಷ್ಟಪಡ ದಂತಹ ಗೊಂಬೆಯನ್ನೇ ಇಷ್ಟಪಟ್ಟಳು.ಇದೇ ಪರಿಶುದ್ಧ ಪ್ರೀತಿ ಆಲ್ವಾ?
ಅಸಹಾಯಕರಿಗೆ,ರೋಗಿಗಳಿಗೆ,ವಿಕಲಾಂಗರಿಗೆ ಅದರ ಅವಶ್ಯಕತೆ ಇತರರಿಗಿಂತ ಹೆಚ್ಚಾಗಿರುತ್ತದೆ.ನಿಸ್ವಾರ್ಥ ಪ್ರೀತಿಯಲ್ಲಿ ಕೇವಲ ಅದನ್ನು ಕೊಡುವ ಭಾವನೆ ಮಾತ್ರ ಇರುತ್ತದೆ,ಹಿಂದಕ್ಕೆ ಪಡೆಯುವ ಆಕಾಂಕ್ಷೆ ಇರುವುದಿಲ್ಲ.ಇಲ್ಲಿ ಈ ಪುಟಾಣಿ ಎಲ್ಲಾ ಗೊಂಬೆಗಳಲ್ಲಿ ವಿಕಲಾಂಗವಾದ ,ಬೇರೆ ಯಾರೂ ಇಷ್ಟಪಡ ದಂತಹ ಗೊಂಬೆಯನ್ನೇ ಇಷ್ಟಪಟ್ಟಳು.ಇದೇ ಪರಿಶುದ್ಧ ಪ್ರೀತಿ ಆಲ್ವಾ?
ಶನಿವಾರ, ಜನವರಿ 28, 2012
”ವ್ರುದ್ಧಾಶ್ರಮ”ಗಳಾಗಿ ಮಾರ್ಪಾಡು ಹೊ೦ದುತ್ತಿರುವ ಹಳ್ಳಿಗಳು.
ಹಳ್ಳಿಗಳೇ ಭಾರತದ ಬೆನ್ನೆಲಬು.ಆದರೆ ಇಗ ಹಳ್ಳಿಗಳಲ್ಲಿ ವಾಸಿಸುವ ಜನರು ಉದ್ಯೋಗ ಅರಸಿ ಪಟ್ಟಣ ಸೇರಲು ಪ್ರಾರಂಭಿಸಿದ ನಂತರ ಹಳ್ಳಿಗಳು ವ್ರುದ್ಧಾಶ್ರಮಗಳಾಗಿ ಮಾರ್ಪಾಡು ಹೊಂದುತ್ತಿದೆ.ಇಗ ಓದಲಿ,ಓದದೆ ಇರಲಿ ಜನರು ಉದ್ಯೋಗಕ್ಕಾಗಿ ಪಟ್ಟಣ ಸೇರುತ್ತಿರುವುದನ್ನು ಕಾಣಬಹುದಾಗಿದೆ.ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಕೃಷಿ ಮಾಡುವವರಿಲ್ಲದೆ,ನಾವು ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗಬಹುದು. ನಾವೂ ಕೂಡ ನಮ್ಮ ಮಕ್ಕಳು ಇಂಜಿನಿಯರ್,ಡಾಕ್ಟರ ಆಗಬೇಕು ಅಂತ ಬಯಸುತ್ತೆವೆಯೇ ಹೊರತು,ನನ್ನ ಮಗ ಒಬ್ಬ ಕೃಷಿಕ ನಾಗಲಿ ಅಂತ ಬಯಸುವುದಿಲ್ಲ.ಆದರೆ ವಿದ್ಯಾವಂತರು ಕೃಷಿಯಲ್ಲಿಯೇ ಏನಾದರೂ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಬಹುದು.ಹಾಗಂತ ಪಟ್ಟಣಗಳೆ ಬೇಡ,ಪಟ್ಟಣದಲ್ಲಿ ಉದ್ಯೋಗವನ್ನೇ ಮಾಡಬಾರದು ಅಂತ ಅಲ್ಲ.ಭಾರತ ಅಭಿವೃದ್ಧಿ ಹೊಂದಲು ಕೈಗಾರಿಕೆಗಳೂ ಅಷ್ಟೇ ಮುಖ್ಯ.ಆದರೆ ಎಲ್ಲರೂ ಕೈಗಾರಿಕೆಗಳಲ್ಲಿಯೇ ದುಡಿಯುವವರಾದರೆ ,ಕೃಷಿಯ ಗತಿ ಏನು?ಅತಿಯಾದರೆ ಅಮೃತವೂ ವಿಷವಾಗುತ್ತದೆ. ಇತ್ತೀಚಿಗೆ ನಾವು ಯಾವುದೇ ಹಳ್ಳಿಗಳಲ್ಲಿ ಕಾಣಬಹುದಾದ ಬಹು ಮುಖ್ಯ ಅಂಶ ಎಂದರೆ ,ಹಳ್ಳಿಗಳು ವೃದ್ಧಾಶ್ರಮ ಗಳಾಗುತ್ತಿರುವುದು.ಯಾವುದೇ ಮನೆಯಲ್ಲಿ ಕೇಳಿದರೂ ,"ನನ್ನ ಮಕ್ಕಳು ಪಟ್ಟಣದಲ್ಲಿದ್ದಾರೆ,ನನ್ನ ಮಗವಿದೇಶದಲ್ಲಿರೋದು,ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಇಬ್ಬರೇ ಇರೋದು "ಅಂತಾರೆ.ಮೊದಲೆಲ್ಲ ಮಕ್ಕಳು, ಮೊಮ್ಮಕ್ಕಳ ಜೊತೆ ಹಾಯಾಗಿ ತಮ್ಮ ಮುಸ್ಸಂಜೆಯ ಜೀವನವನ್ನು ಸಾಗಿಸುತ್ತಿದ್ದವರು,ಇಂದು ಏಕಾಂಗಿಯಾಗಿ ತಮ್ಮ ಕೊನೆಗಾಲವನ್ನು ಕಳೆಯುವಂತಹ ಪರಿಸ್ತಿತಿ ಬಂದೊದಗಿದೆ.ತಮ್ಮ ಮಕ್ಕಳು ,ತಮ್ಮ ಕೊನೆಗಾಲದಲ್ಲಿ ತಮಗೆ ಆಸರೆಯಾಗಿರುತ್ತಾರೆ ಎಂಬ ಕಿಂಚಿತ್ ಆಸೆಯನ್ನು ತಂದೆ ತಾಯಿ ಇಟ್ಟುಕೊಳ್ಳುವಂತಿಲ್ಲ.ಎಷ್ಟೋ ಮಕ್ಕಳಿಗೆ ತಮ್ಮ ತಂದೆ ತಾಯಿಯ ಅಂತ್ಯಸಂಸ್ಕಾರಕ್ಕೂ ಬರಲು ಆಗುವುದಿಲ್ಲ.ಏಕೆಂದರೆ ,ಅವರು ವಿದೇಶದಲ್ಲಿರುತ್ತಾರಲ್ಲ.!!!!!!!!!!
ಶನಿವಾರ, ಡಿಸೆಂಬರ್ 17, 2011
ದೇಶದ ಪ್ರಗತಿಯಲ್ಲಿ ಮಹಿಳೆಯ ಪಾತ್ರ.
ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹುಡುಗಿ .ಹಳ್ಳಿಯಲ್ಲಿ ಸಾಮಾನ್ಯವಾಗಿ ಕೆಲಸ ಮುಗಿದ ಮೇಲೆ ಅಕ್ಕಪಕ್ಕದ ಮನೆಯವರೆಲ್ಲ ಸೇರಿಕೊಂಡು ಹರಟೆ ಹೊಡೆಯುವುದು ಸಾಮಾನ್ಯ.ಆದರೆ ಈಗ ಹಾಗೇನಿಲ್ಲ ಬಿಡಿ. ಯಾಕಂದ್ರೆ ಸಾಮಾನ್ಯವಾಗಿ ಸಂಘಗಳು [ಮಹಿಳಾ ಸಂಘಗಳು] ಜಾರಿಗೆ ಬಂದಮೇಲೆ ಪ್ರತಿಯೊಬ್ಬ ಮಹಿಳೆಗೂ ಒಂದು ನಿಮಿಷವೂ ಬಿಡುವಿಲ್ಲದ ಕೆಲಸವಿರುತ್ತದೆ.ಮನೆಗೆಲಸ,ತೋಟದಕೆಲಸ ಎಲ್ಲಾ ಮುಗಿದ ಮೇಲೆ ಸಂಘದ ಕೆಲಸ.ಹೀಗೆ ಮಹಿಳೆಯರು ಸ್ವಯಂ ಉದ್ಯೋಗವನ್ನು ಕಂಡುಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.ಇದಿಷ್ಟು ಹಳ್ಳಿಯಲ್ಲಿನ ಮಹಿಳೆಯರ ಸ್ತಿತಿಗತಿಯಾದರೆ,ಪಟ್ಟಣದಲ್ಲಿನ ಮಹಿಳೆಯರು ಸಾಮಾನ್ಯಾವಾಗಿ ಉದ್ಯೋಗಿಗಳಾಗೆ ಇರುತ್ತಾರೆ.ಇನ್ನು ಕೆಲವರು ಉದ್ಯೋಗ ಮಾಡದೆ ಇದ್ದರೂ ,ಸಂಗೀತ ಕಲಿಯೋದು,ಡಾನ್ಸ್ ಕಲಿಯೋದು,ಕಂಪ್ಯೂಟರ್ ಕಲಿಯೋದು,ಟೈಲರಿಂಗ್ ........................ಬೇಕಾದಷ್ಟು ಕೋರ್ಸ್ ಗಳಿರುತ್ತದಲ್ಲಾ ಅದರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ,ಅದನ್ನು ಕಲಿಯೋದರಲ್ಲಿ ತಮ್ಮಬಿಡುವಿನ ವೇಳೆಯನ್ನು ಸಮರ್ಪಕವಾಗಿ ಕಳೆಯುತ್ತಾರೆ. ಆದರೆ ,ಪಟ್ಟಣದಲ್ಲಿ ಹೀಗೆ ನಾನಾತರಹದ ಅವಕಾಶಗಳಿದ್ದರೂ ,ಯಾವುದನ್ನೂ ಉಪಯೋಗಿಸಿಕೊಳ್ಳದೆ ಕೇವಲ ಧಾರಾವಾಹಿಗಳನ್ನು ನೋಡುವುದು,ಆಕಡೆ ಇಕಡೆ ಮನೆಯವರ ಸುದ್ದಿ ಮಾತನಾಡುತ್ತಾ ,ಹರಟೆ ಹೊಡೆಯುತ್ತಾ ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿಕೊಂಡು ,ಸುಮ್ಮನೆ ದಿನ ದೂಡುವವರೂ ಇದ್ದಾರೆ.ಮೊನ್ನೆ ನಮ್ಮ ಯಜಮಾನರು ಚೀನಾಕ್ಕೆ ಹೋಗಿಬಂದವರು ಹೇಳುತ್ತಿದ್ದರು,ಅಲ್ಲಿ ಪ್ರತಿಯೊಂದು ಕೆಲಸದಲ್ಲಿಯೂ ಮಹಿಳೆಯರೇ ಮುಂದು.ದಿನದಲ್ಲಿ ಒಂದೊದು ನಿಮಿಷವನ್ನೂ ಅವರು ದುಡಿಯುವುದಕ್ಕಾಗಿಯೇ ಮೀಸಲಿಡುತ್ತಾರೆ.ಅಲ್ಲಿ ಸೋಮಾರಿಗಳು ಭಾರಿ ಕಡಿಮೆ.ಆದ್ದರಿಂದಲೇ,ಅಲ್ಲಿ ಅಷ್ಟೊಂದು ಜನಸಂಕ್ಯೆ ಇದ್ದರೂ ಕೂಡ ಆ ದೇಶ ಅಷ್ಟೊಂದು ಮುಂದುವರಿಯಲು ಕಾರಣವಾಗಿದೆ.ಆದರೆ ನಮ್ಮ ದೇಶದಲ್ಲಿ ,ದುಡಿಯುವವರು ಒಬ್ಬರು ,ಕೂತು ತಿನ್ನುವವರು ನಾಲ್ಕು ಮಂದಿ.ಆದರೆ ,ನಮ್ಮ ದೇಶದಲ್ಲೂ ಮಹಿಳೆಯರು ಹೆಚ್ಚು ವಿದ್ಯ್ಯಾವನ್ಥರಾಗಿ,ಬೇರೆವಿಶಯಗಳನ್ನು ಚರ್ಚಿಸುವುದರ ಬದಲು.ನಮ್ಮಿಂದ ನಾವು ಹುಟ್ಟಿದ ಈ ನಾಡಿಗೆ ಏನಾದರೂ ಅಲ್ಪ ಸೇವೆಯನ್ನಾದರೂ ಸಲ್ಲಿಸಲು ಸಾಧ್ಯವೇ?ಎಂಬ ಒಂದು ಚಿಕ್ಕ ಆಲೋಚನೆ ಯನ್ನು ಮಾಡಿದರೂ ನಮ್ಮ ದೇಶ ಮುಂದುವರಿದ ದೇಶ ಆಗುವುದರಲ್ಲಿ ಅನುಮಾನವೇ ಇಲ್ಲ.
ಭಾನುವಾರ, ಡಿಸೆಂಬರ್ 11, 2011
ಗಣಪತಿಯನ್ನು ನೀರಿನಲ್ಲಿ ಯಾಕೆ ಮುಳುಗಿಸುತ್ತಾರೇ?
ಚೌತಿ ಹಬ್ಬಕ್ಕೆ ಊರಿಗೆ ಹೋದಾಗ ನನ್ನ ಮಗನಿಗೆ ಸ೦ಭ್ರಮವೋ ಸ೦ಭ್ರಮ.ಪಟಾಕಿ ಹೊಡಿಬಹುದಲ್ಲಾ ಅ೦ತ.ನಮ್ಮ ಮನೆಯಲ್ಲಿ ಗಣಪತಿ ಕೂರಿಸುತ್ತಾರೆ.ಸರಿ,ಬೆಳಗ್ಗೆಯಿಂದ ಅಮ್ಮ ,ನಾನು ಎಲ್ರೂ ಅಡುಗೆಮನೆಯ ಕೆಲಸದಲ್ಲಿ,ನನ್ನ ತಮ್ಮ ಪೂಜೆಗೆ ರೆಡಿ ಮಾಡೋದ್ರಲ್ಲಿ ,ಅಜ್ಜ ಮೊಮ್ಮಗ ಪಟಾಕಿ ಹೊಡೆಯೋದ್ರಲ್ಲಿ ನಿರತರಾಗಿದ್ದೆವು.ಪುರೋಹಿತರು ಬಂದರು ,ಪೂಜೆ ಎಲ್ಲಾ ಮುಗಿತು. ಹಬ್ಬದ ಊಟವೂ ಆಯಿತು.ನಂತರ ನಮ್ಮ ಊರಿನಲ್ಲಿ 22 ಮನೆಗಳಿವೆ,ಹೆಚ್ಚು ಕಡಿಮೆ ಎಲ್ಲರ ಮನೆಯಲ್ಲೂ ಗಣಪತಿ ಕೂರಿಸುತ್ತಾರೆ .ನಾವೆಲ್ಲಾ ಎಲ್ಲರ ಮನೆಗಳಿಗೂ ಹೋಗಿ ಗಣಪತಿಯ ದರ್ಶನ ಮಾಡಿ ಬರುವುದು ನಮ್ಮ ಊರಿನ ಪದ್ಧತಿ.ಅದರಂತೆ ಎಲ್ಲರ ಮನೆಗಳಿಗೂ ನಾವು ಹೋಗಿಬಂದೆವು.ಆದಿನ ಸಂಜೆ ಊರಿನವರೆಲ್ಲ ಸೇರಿ ,ನಮ್ಮ ಊರಿನ ಕೆರೆಯಲ್ಲಿ ಗಣಪತಿಯನ್ನು ಮುಳುಗಿಸುವ ಕಾರ್ಯಕ್ರಮ.ಸರಿ ,ಅವರವರ ಮನೆಯ ಗಣಪತಿಯನ್ನು ಎಲ್ಲರೂ ಕೆರೆಬಳಿ ತೊಗೋ೦ಡೂ ಬಂದರು.ಎಲ್ಲರೂ ಪಟಾಕಿ ಹೊಡೆದೂ ಆಯ್ತು,''ಗಣಪತಿ ಬಪ್ಪ ಮೋರಿಯೋ''ಎಂದು ಕೂಗುತ್ತ ,ಇನ್ನೇನು ಗಣಪತಿಯನ್ನು ಕೆರೆಯಲ್ಲಿ ಮುಳುಗಿಸಬೇಕು ಅನ್ನೋಅಸ್ಟರಲ್ಲಿ ನನ್ನ ಮಗ ಪಟಾಕಿ ಹೊಡೆಯೋದನ್ನು ಬಿಟ್ಟು[ಅವನು ಹೊಡೆಯೊಲ್ಲ,ಪಟಾಕಿ ಹೊಡೆಯೋದನ್ನು ನೋಡ್ತಾನೆ.ಅವನಿಗಿನ್ನೂ ೫ ವರ್ಷ]ಓಡಿಬಂದ ''.ಅಮ್ಮ ಗಣಪತಿನ್ ಯಾಕೆ ಕೆರೆಯಲ್ಲಿ ಮುಳುಗಿಸುತ್ತಾರೆ?ಇಷ್ಟೊತ್ತು ದೇವರು ಅಂತ ಪೂಜೆ ಮಾಡಿದ್ರಿ,ದೇವರನ್ನ ನೀರಿಗೆ ಹಾಕ್ತಾರ?ಗಣಪತಿಗೆ ಚಳಿಯಾಗಿ ಶೀತ ಆಗಲ್ವಾ?ಪಾಪ ಗಣಪತಿ ಎಷ್ಟು ಅಳ್ತಾನೋ ಏನೋ?ಅವರಮ್ಮ ನಿಮಗೆ ಬಯ್ಯೋದಿಲ್ವಾ?ಹೇಳಮ್ಮ ಗಣಪತಿನ್ ಯಾಕೆ ಕೆರೆಗೆ ಹಾಕ್ತಾರೆ? ಅಂದ.ಸರಿ ,ಆ ಹೊತ್ತಿಗೆ ಏನೋ ಒಂದು ಹೇಳಿ ಸುಮ್ಮನಾಗಿಸಿದೆ.ಆದರೆ ಆಮೇಲೆ ನನಗೂ ಅನ್ನಿಸ್ತು ,ಹೌದು ಗಣಪತಿನ ಯಾಕ್ ಮುಳುಗಿಸುತ್ತಾರೆ?ನನಗೂ ಸರಿಯಾದ ಉತ್ತರ ಯಾರಿಂದಲೂ ಸಿಗಲಿಲ್ಲ.ಆದರೆ ನನ್ನ ಮಗ ಒಂದು ದಿನ ಪುರೋಹಿತರು ನಮ್ಮ ಮನೆಗೆ ಬಂದಾಗ ,ಅವರನ್ನೇ ಕೇಳಿದ,''ಭಟ್ರೇ,ಗಣಪತಿನ ಯಾಕೆ ಕೆರೆ ಯಲ್ಲಿ ಮುಳುಗಿಸುತ್ತಾರೆ?''.ಅದಕ್ಕೆ ಪುರೋಹಿತರು,''ಗಣಪತಿ ಗಂಗೆಗೂ ಮಗ ,ಅದಕ್ಕೆ ಅವನ ಅಮ್ಮನ ಜೊತೆ ಅವನನ್ನ ಕಳುಹಿಸೋದು.ಗಂಗೆ ಅಂದರೆ ,ನೀರು ತಾನೇ?ಅದಕ್ಕೆ ಗಣಪತಿನ ನೀರಲ್ಲಿ ಮುಳುಗಿಸೋದು ಗೊತ್ತಾಯ್ತ?''ಅಂದರು.ಆಗ ನನ್ನ ಮಗನಿಗೆ ಸಮಾಧಾನವಾಯಿತು.ಮಕ್ಕಳು ಚಿಕ್ಕವರಾದರೂ ಅವರ ಯೋಚನಾಲಹರಿ ತುಂಬಾ ದೊಡ್ದದಿರುತ್ತದಲ್ವಾ?
ಶನಿವಾರ, ಡಿಸೆಂಬರ್ 10, 2011
nanna maga kelida question.
ಒಂದು ದಿನ ಊಟ ಮಾಡುತ್ತಿರುವಾಗ ,ನನ್ನ ಮಗ ಕೇಳಿದ,''ಅಮ್ಮ ಅನ್ನ ದೇವರು ಅಂತೀಯ ,ಅನ್ನಪೂರ್ಣೆ ಶ್ಲೋಕ ಹೇಳು ಅಂತಿಯ ದೇವರನ್ನ ಯಾರಾದ್ರು ತಿಂತಾರ?ನಾವು ದೇವರನ್ನೇ ತಿಂದಹಾಗೆ ಆಗೋಲ್ವೇ?ಹೇಳಮ್ಮ ಅನ್ನ ದೇವರು ಹೌದೋ ಅಲ್ಲವೋ?"ಅಂದ.ಅದಕ್ಕೆ ನನಗೊಮ್ಮೆ ಏನು ಉತ್ತರ ಹೇಳಬೇಕೆಂದೇ ತೋಚಲಿಲ್ಲ!ನೀವಾದ್ರೆ ಏನ್ ಹೇಳ್ತಿದ್ರಿ?ದಯವಿಟ್ಟು ಹೇಳ್ರಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)




















