ಒಂದು ದಿನ ಊಟ ಮಾಡುತ್ತಿರುವಾಗ ,ನನ್ನ ಮಗ ಕೇಳಿದ,''ಅಮ್ಮ ಅನ್ನ ದೇವರು ಅಂತೀಯ ,ಅನ್ನಪೂರ್ಣೆ ಶ್ಲೋಕ ಹೇಳು ಅಂತಿಯ ದೇವರನ್ನ ಯಾರಾದ್ರು ತಿಂತಾರ?ನಾವು ದೇವರನ್ನೇ ತಿಂದಹಾಗೆ ಆಗೋಲ್ವೇ?ಹೇಳಮ್ಮ ಅನ್ನ ದೇವರು ಹೌದೋ ಅಲ್ಲವೋ?"ಅಂದ.ಅದಕ್ಕೆ ನನಗೊಮ್ಮೆ ಏನು ಉತ್ತರ ಹೇಳಬೇಕೆಂದೇ ತೋಚಲಿಲ್ಲ!ನೀವಾದ್ರೆ ಏನ್ ಹೇಳ್ತಿದ್ರಿ?ದಯವಿಟ್ಟು ಹೇಳ್ರಿ.
3 ಕಾಮೆಂಟ್‌ಗಳು:
ಮಕ್ಕಳ ಕೆಲವು ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಕೊಡುವುದು ಕಷ್ಟವೇ ಸರಿ."ಅನ್ನ ನಮ್ಮ ದೇಹದ ಕೆಲಸ ಕಾರ್ಯಗಳಿಗೆ ಬೇಕಾದ ಪ್ರಾಣ ಶಕ್ತಿಯನ್ನು ಕೊಡುವುದರಿಂದ ಅದನ್ನು ದೇವರು ಎನ್ನುತ್ತಾರೆ ಮರಿ" ಎಂದು ಹೇಳಬಹುದು ಅನ್ನಿಸುತ್ತೆ.
ಥ್ಯಾ೦ಕ್ಸ್ ಸರ್.ಅ೦ತು ನನ್ನ ಮಗನ ಒ೦ದು ಪ್ರಶ್ನೆಗೆ ಉತ್ತರ ಸಿಕ್ಕಿತು.
ಅನ್ನ ಹೊರಗಡೆ ಹಾಗೆ ಇದ್ರೆ ಕೆಟ್ಟು ಹೋಗುತ್ತೆ, ದೇವ್ರು ಅಲ್ವ ಹಾಗೆ ಆಗ್ಬಾರ್ದು ಅಂತ ಹೊಟ್ಟೆಗೆ ಸೇರಿಸ್ತಿವಿ ಅಂತ ಹೇಳ್ಬಿಡಿ.....
ಕಾಮೆಂಟ್ ಪೋಸ್ಟ್ ಮಾಡಿ